ಲಾಕ್ ಡೌನ್ ನಿಂದ ಕುಟುಂಬ ಕಂಗಾಲು: ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ನೆರೆಹೊರೆಯ ಮುಸ್ಲಿಮರು
Update: 2020-03-30 16:31 GMT
ಹೊಸದಿಲ್ಲಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಲಾಕ್ ಡೌನ್ ನಡುವೆ ಮೃತಪಟ್ಟಿದ್ದು, ನೆರೆಹೊರೆಯ ಮುಸ್ಲಿಮರು ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ.
ಮೃತ ವ್ಯಕ್ತಿ ರವಿಶಂಕರ್ ಬುಲಂದ್ ಶಹರ್ ನಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ. ಇತ್ತೀಚೆಗೆ ರವಿಶಂಕರ್ ಅನಾರೋಗ್ಯದಿಂದ ಮೃತಪಟ್ಟ ನಂತರ ಅವರ ಮುಸ್ಲಿಂ ಸ್ನೇಹಿತರು ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತಿಮ ಯಾತ್ರೆಯ ವೇಳೆ ಮುಸ್ಲಿಮರು 'ರಾಮ ನಾಮ ಸತ್ಯ ಹೇ' ಎಂದು ಘೋಷಣೆ ಕೂಗುತ್ತಾ ಸಾಗಿದರು.
ಲಾಕ್ ಡೌನ್ ಆದ ಕಾರಣ ಯಾರೂ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮುಸ್ಲಿಮರೇ ಮುಂದೆ ನಿಂತು ಅಂತ್ಯಸಂಸ್ಕಾರಕ್ಕೆ ಮುಂದಾದರು. ನಂತರ ಸಂಬಂಧಿಕರೂ ಅವರಿಗೆ ಜೊತೆಯಾದರು ಎಂದು ರವಿಶಂಕರ್ ರ ಪುತ್ರ ಹೇಳುತ್ತಾರೆ.