ಲಾಕ್‌ಡೌನ್ ಎಫೆಕ್ಟ್: ಆಸ್ಪತ್ರೆಯಿಂದ ಬಿಡುಗಡೆಯಾದ ವೃದ್ಧ ತಂದೆಯನ್ನು ಹೆಗಲ ಮೇಲೆ ಹೊತ್ತೊಯ್ದ ಮಗ!

Update: 2020-04-16 06:13 GMT

ಕೊಲ್ಲಂ, ಎ.16: ಆಸ್ಪತ್ರೆಯಿಂದ ಬಿಡುಗಡೆಯಾದ ತಂದೆಯನ್ನು ಕರೆ ತರುತ್ತಿದ್ದ ಆಟೊ ರಿಕ್ಷಾವನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ವೃದ್ಧ ತಂದೆಯನ್ನು ಮಗ ಹೆಗಲ ಮೇಲೆ ಕೂರಿಸಿಕೊಂಡು ಕರೆದೊಯ್ದ ಘಟನೆ ವರದಿಯಾಗಿದೆ.

ಆಟೊ ಚಾಲಕ ರಾಯ್ ಸ್ವಯಂ ದೃಢೀಕರಣ ಹೊಂದಿರಲಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ಆಟೊ ವಶಪಡಿಸಿಕೊಂಡರು. ಈ ಹಿನ್ನೆಲೆಯಲ್ಲಿ ಮಗ 89 ವರ್ಷ ವಯಸ್ಸಿನ ತಂದೆಯನ್ನು ಸುಮಾರು 100 ಮೀಟರ್ ದೂರ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜನಸಾಮಾನ್ಯರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದ್ದು, ಕುಳತುಪುರ ನಿವಾಸಿ ರಾಯ್ ತಮ್ಮ ತಂದೆ ಜಾರ್ಜ್ ಅವರನ್ನು ಪುನಲೂರು ತಾಲೂಕು ಆಸ್ಪತ್ರೆಯಿಂದ ಕರೆತರುವ ವೇಳೆ ಆಸ್ಪತ್ರೆಯಿಂದ ಸುಮಾರು 500 ಮೀಟರ್ ದೂರದಲ್ಲಿ ಆಟೊವನ್ನು ತಡೆದು ಸ್ವಯಂ ದೃಢೀಕರಣಕ್ಕಾಗಿ ಕೇಳಿದ್ದಾರೆ. ರಾಯ್ ಬಳಿ ಅದು ಇಲ್ಲದ ಕಾರಣ ಪೊಲೀಸರು ವಾಹನ ಚಲಾಯಿಸಲು ಅವಕಾಶ ನೀಡಲಿಲ್ಲ. ಅಸ್ವಸ್ಥ ತಂದೆಯನ್ನು ಕರೆದೊಯ್ದಯುತ್ತಿರುವುದಾಗಿ ಹೇಳಿದರೂ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಜಾರ್ಜ್ ಅವರನ್ನು ಎಪ್ರಿಲ್ 12ರಂದು ಮೂತ್ರನಾಳ ಸೋಂಕು ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಯ ಬಗ್ಗೆ ಮೂರು ವಾರಗಳ ಒಳಗೆ ವರದಿ ನೀಡುವಂತೆ ಕೊಲ್ಲಂ ಗ್ರಾಮೀಣ ಎಸ್ಪಿಯವರಿಗೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News