ಫೇಸ್‌ಬುಕ್‌ನಲ್ಲಿ ಯುವತಿಯ ಹೆಸರಿನಲ್ಲಿ ಕೋಮುದ್ವೇಷ ಹರಡುತ್ತಿದ್ದ ಯುವಕ ಸೆರೆ

Update: 2020-04-19 05:56 GMT

ರಾಯ್‌ಪುರ(ಛತ್ತೀಸ್‌ಗಡ),ಎ.19: ನಿಶಾ ಜಿಂದಾಲ್ ಎಂಬ ಹೆಸರಿನಲ್ಲಿ 10,000 ಫಾಲೋವರ್ಸ್ ಗಳಿದ್ದ ಫೇಸ್‌ಬುಕ್ ಖಾತೆ ಮುಖಾಂತರ ಕೋಮು ಸೌಹಾರ್ದತೆ ಕದಡುತ್ತಿದ್ದ ಆರೋಪದಲ್ಲಿ ರವಿ ಪೂಜಾರ್ ಎಂಬಾತನನ್ನು ರಾಯ್‌ಪುರ ಪೊಲೀಸರು ಬಂಧಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ತನ್ನ ನೈಜ ಪೋಟೋವನ್ನು ಹಂಚಿಕೊಂಡು ನಿಶಾ ಜಿಂದಾಲ್‌ರ 10,000 ಫಾಲೋವರ್ಸ್ ಗಳಿಗೆ ತನ್ನ ನೈಜ ಗುರುತನ್ನು ತಿಳಿಸುವಂತೆ ರವಿ ಪೂಜಾರ್‌ಗೆ ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಯ ಪೋಟೋವನ್ನು ಹಂಚಿಕೊಂಡ ಐಎಎಸ್ ಅಧಿಕಾರಿ ಪ್ರಿಯಾಂಕ ಶುಕ್ಲಾ, ರಾಯಪುರ ಪೊಲೀಸರು ಫೇಸ್‌ಬುಕ್ ಬಳಕೆದಾರಳಾದ ನಿಶಾ ಜಿಂದಾಲ್‌ರನ್ನು ಬಂಧಿಸಲು ತೆರಳಿದಾಗ ಕಳೆದ 11 ವರ್ಷಗಳಿಂದ ಇಂಜಿನಿಯರಿಂಗ್‌ ಪಾಸಾಗಲು ವಿಫಲನಾಗಿರುವ ರವಿಯೇ ನಿಜವಾದ ನಿಶಾ ಎಂದು ತಿಳಿದುಬಂತು. ರವಿ ಬಳಿ ನಿಶಾ ಅವರ 10000 ಕ್ಕೂ ಅಧಿಕ ಫಾಲೋವರ್ಸ್ ಗಳಿಗೆ ಸತ್ಯ ಹೇಳುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿಶಾ ಜಿಂದಾಲ್‌ರವರ ಫೇಸ್‌ಬುಕ್ ಪೇಜ್‌ನಲ್ಲಿ ತನ್ನ ಪೋಟೋ ಹಂಚಿಕೊಳ್ಳುವಂತೆ ರವಿಗೆ ಒತ್ತಾಯಿಸಲಾಯಿತು. "ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ.ನಾನು ನಿಶಾ ಜಿಂದಾಲ್'' ಎಂದು ರವಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಬಂಧಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 153 (ಸೌಹಾರ್ದ ಕದಡುವುದು) ಹಾಗೂ 295(ಧರ್ಮ ನಿಂದನೆ) ಅಡಿ ಪ್ರಕರಣ ದಾಖಲಿಸಲಾಗಿದೆ.

ಡಿಪಿಯನ್ನು ನೋಡಿಯೇ ಎಲ್ಲರೂ ರವಿಯನ್ನು ಹಿಂಬಾಲಿಸಿರಬೇಕು ಎಂದು ಐಪಿಎಸ್ ಅಧಿಕಾರಿ ಅರುಣ್ ಬಾಥ್ರೊ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶುಕ್ಲಾ, ಸರ್, ನೀವು ಫೇಸ್‌ಬುಕ್ ಪ್ರೊಫೈಲ್‌ನ್ನುನೋಡಿದಾಗ,.. ಆಕೆ ಅಂದರೆ ಆತ 10,000ಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದ ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಂದನ್ನು ಸತ್ಯವೆಂದು ನಂಬುವ ಜನರಿಗೆ ಇದೊಂದು ಪಾಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News