ಪಿಎಂ ಕೇರ್ಸ್‌ಗೆ ಪ್ರತಿ ತಿಂಗಳು ಒಂದು ದಿನದ ಸಂಬಳ ದೇಣಿಗೆ: ಕಂದಾಯ ಇಲಾಖೆಯ ಉದ್ಯೋಗಿಗಳಿಗೆ ಸುತ್ತೋಲೆ

Update: 2020-04-20 17:34 GMT

ಹೊಸದಿಲ್ಲಿ, ಎ.20: ಕೊರೋನ ವೈರಸ್ ಪಿಡುಗಿನ ವಿರುದ್ಧ ಹೋರಾಡುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಕೈಜೋಡಿಸಲು, 2021ರವರೆಗೆ ಪ್ರತಿ ತಿಂಗಳೂ ತಮ್ಮ ಒಂದು ದಿನದ ಸಂಬಳವನ್ನು ದೇಣಿಗೆಯಾಗಿ ನೀಡಬೇಕೆಂದು ಕೋರಿ, ಕೇಂದ್ರ ಸರಕಾರದ ವಿತ್ತ ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆ ಯು ತನ್ನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದೆ.

ಒಂದು ವೇಳೆ ಯಾವುದೇ ಅಧಿಕಾರಿ ದೇಣಿಗೆ ನೀಡಲು ಬಯಸದೆ ಇದ್ದಲ್ಲಿ ಹಾಗೆಂದು ಲಿಖಿತವಾಗಿ ಬರೆದುಕೊಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸ ಲಾಗಿದೆ.

ಹಲವು ರಾಜ್ಯ ಸರಕಾರಗಳು, ತಮ್ಮ ನೌಕರರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೋರಿ ಪತ್ರ ಬರೆದಿವೆ. ಆದರೆ ಕೇಂದ್ರ ಸರಕಾರದ ವಿತ್ತ ಸಚಿವಾಲಯವು,ತನ್ನ ನೌಕರರಿಂದ ಈ ಬಗ್ಗೆ ಒಪ್ಪಿಗೆಯನ್ನು ಪಡೆದುಕೊಂಡಿರುವ ಹಾಗೆ ನಡೆದುಕೊಳ್ಳುತ್ತಿದೆ. ಒಂದು ವೇಳೆ ಉದ್ಯೋಗಿಗಳು ದೇಣಿಗೆಯನ್ನು ನೀಡಲು ಇಚ್ಚಿಸದೇ ಇದ್ದಲ್ಲಿ ಹಾಗೆಂದು ಲಿಖಿತವಾಗಿ ಬರೆದುಕೊಡುವಂತೆ ಉದ್ಯೋಗಿಗಳನ್ನು ಕೇಳುವ ಮೂಲಕ ವಿತ್ತ ಸಚಿವಾಲಯವು ಅವರನ್ನು ಗೊಂದಲದ ಹಾಗೂ ಸಂಕಷ್ಟದ ಸನ್ನಿವೇಶಕ್ಕೆ ತಳ್ಳಿದೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ತಿಳಿಸಿದ್ದಾರೆ.

ಪಿಎಂ ಕೇರ್ಸ್‌ ಫಂಡ್ ಒಂದು ಖಾಸಗಿ ನಿಧಿಯಾಗಿರುವಾಗ ಅದಕ್ಕೆ ದೇಣಿಗೆ ನೀಡಬೇಕೆಂದು ಯಾಕೆ ಕೇಳಲಾಗುತ್ತಿದೆಯೆಂದೂ ಕೆಲವು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಒಂದು ವೇಳೆ ಪಿಎಂ ಕೇರ್ಸ್‌ ನಿಧಿಗೆ ಬದಲು ಲಾಕ್‌ಡೌನ್‌ಗೆ ಸಂಬಂಧಿಸಿದ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಇತರ ಸರಕಾರಿ ಏಜೆನ್ಸಿಗಳು ಅಥವಾ ಎನ್‌ಜಿಓ ಸಂಸ್ಥೆಗಳು ಸ್ಥಾಪಿಸಿರುವ ನಿಧಿಗಳಿಗೆ ದೇಣಿಗೆಯನ್ನು ನೀಡಲು ಅಧಿ ಕಾರಿಗಳು ಬಯಸಿದ್ದರೆ ಅದರಲ್ಲಿ ತಪ್ಪೇನಿದೆ ಎಂದವರು ಪ್ರಶ್ನಿಸಿದ್ದಾರೆ.

ತಮ್ಮ ಹಿರಿಯ ಅಧಿಕಾರಿಗಳಷ್ಟು ಉಳಿತಾಯವನ್ನು ಹೊಂದಿರದ ಕಿರಿಯ ಅಧಿಕಾ ರಿಗಳಿಗೂ ಪ್ರತಿ ತಿಂಗಳೂ ಒಂದು ದಿನದ ವೇತನವನ್ನು ಕಡಿತಗೊಳಿಸುವ ಔಚಿತ್ಯವನ್ನು ಅವರು ಪ್ರಶ್ನಿಸಿದ್ದಾರೆ.

‘ಪಿಎಂ-ಕೇರ್ಸ್ ಸಾರ್ವಜನಿಕ ನಿಧಿಯಲ್ಲವೆಂದು ಕೇಂದ್ರ ಸರಕಾರವು ದಿಲ್ಲಿ ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿರು ಬಗ್ಗೆಯೂ ಅವರು ಗಮನಸೆಳೆದಿದ್ದಾರೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಖಾಸಗಿ ನಿಧಿಗಿ ಈ ದೇಣಿಗೆಯನ್ನು ವರ್ಗಾಯಿಸುವುದು ಪ್ರಶ್ನಾರ್ಹವಾಗಿದೆಯೆಂದು ಅವರು ಅಭಿಪ್ಪಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News