ಮಹಾರಾಷ್ಟ್ರ: 5000ದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ
ಹೊಸದಿಲ್ಲಿ, ಎ.21: ಮಹಾರಾಷ್ಟ್ರದಲ್ಲಿ ಇಂದು(ಮಂಗಳವಾರ) ಹೊಸದಾಗಿ 552 ಪ್ರಕರಣ ದಾಖಲಾಗುವುದರೊಂದಿಗೆ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 5,000ದ ಗಡಿ ದಾಟಿದ್ದು ಒಟ್ಟು 5,218ಕ್ಕೆ ತಲುಪಿದೆ. ಈ ಮಧ್ಯೆ, ದೇಶದಲ್ಲಿ ಮಾರಣಾಂತಿಕ ಸೋಂಕಿಗೆ ಬಲಿಯಾದವರ ಸಂಖ್ಯೆ 603ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಮಂಗಳವಾರ 565 ಹೊಸ ಪ್ರಕರಣ ದಾಖಲಾಗಿದ್ದರೆ 44 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 18,985ಕ್ಕೇರಿದೆ. ಇದರಲ್ಲಿ 15,122 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 3,260 ಜನ ಗುಣಮುಖರಾಗಿದ್ದಾರೆ . 603 ಜ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಮಂಗಳವಾರ 552 ಹೊಸ ಪ್ರಕರಣದೊಂದಿಗೆ ದೃಢೀಕೃತ ಪ್ರಕರಣ 5,218ಕ್ಕೆ ಏರಿಕೆ. ಮಂಗಳವಾರ 19 ಜನ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 251 ಕ್ಕೇರಿದೆ. ಮುಂಬೈಯಲ್ಲೇ 3,451 ಪ್ರಕರಣ ದೃಢಪಟ್ಟಿದೆ.
ತಮಿಳುನಾಡಿನಲ್ಲಿ ಮಂಗಳವಾರ 76 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ದೃಢೀಕೃತ ಪ್ರಕರಣದ ಸಂಖ್ಯೆ 1,596ಕ್ಕೇರಿದೆ. ಒಂದು ಸಾವು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ 18ಕ್ಕೇರಿದೆ.
ದಿಲ್ಲಿಯಲ್ಲಿ ಮಂಗಳವಾರ 75 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 2,156ಕ್ಕೇರಿದೆ. ರಾಜ್ಯದಲ್ಲಿ ನಿಬರ್ಂಧಿತ ವಲಯಗಳನ್ನು 87ಕ್ಕೇರಿಸಲಾಗಿದೆ ಎಂದು ದಿಲ್ಲಿ ಸರಕಾರ ಹೇಳಿದೆ.