ಹಿರಿಯ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಕೊರೋನ ವೈರಸ್ ಗೆ ಬಲಿ

Update: 2020-04-27 07:54 GMT

ಅಹ್ಮದಾಬಾದ್: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅಹ್ಮದಾಬಾದ್‍ನ ಕಾರ್ಪೊರೇಟರ್ ಬದ್ರುದ್ದೀನ್ ಶೇಖ್ ಅವರು ಕೋವಿಡ್-19 ಸೋಂಕಿಗೆ ತುತ್ತಾಗಿ ರವಿವಾರ ಕೊನೆಯುಸಿರೆಳೆದಿದ್ದಾರೆ. ಅವರನ್ನು ನಗರದ ಎಸ್‍ವಿಪಿ ಆಸ್ಪತ್ರೆಗೆ ಎಂಟು ದಿನಗಳ ಹಿಂದೆ ದಾಖಲಿಸಲಾಗಿತ್ತು.

ಕಾಂಗ್ರೆಸ್ ನಾಯಕ ಶಕ್ತಿಸಿಂಗ್ ಗೋಹಿಲ್ ತಮ್ಮ ಸ್ನೇಹಿತನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

“ನನ್ನ ಸ್ನೇಹಿತ #ಬದ್ರು ಓರ್ವ ನಿಜವಾದ #ಕೊರೋನವಾರಿಯರ್. ಅವರು ಅಹ್ಮದಾಬಾದ್‍ನಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವ ವೇಳೆ ಕೊರೋನ ಸೋಂಕಿಗೆ ತುತ್ತಾಗಿದ್ದರು. ಅವರು ಕೊರೋನವೈರಸ್‍ಗೆ ಬಲಿಯಾಗಿರುವುದು  ನಮಗೆ ದೊಡ್ಡ  ನಷ್ಟ. ಎಲ್ಲರಿಗೂ ಪಾಠ, ಎಚ್ಚರಿಕೆಯಿಂದಿರಿ, ಸ್ಥಳೀಯ ಪ್ರಾಧಿಕಾರಗಳೊಂದಿಗೆ ಸಹಕರಿಸಿ” ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News