ಗುಜರಾತ್‌ನಲ್ಲಿ ಒಂದೇ ದಿನ 27 ಮಂದಿ ಸಾವು: ಅಹ್ಮದಾಬಾದ್, ಸೂರತ್‌ನಲ್ಲಿ ಸಂಪೂರ್ಣ ಲಾಕ್‌ಡೌನ್
ಅಹ್ಮದಾಬಾದ್,ಮೇ 7: ಗುಜರಾತ್ ರಾಜ್ಯದಲ್ಲಿ ಬುಧವಾರ ಒಂದೇ ದಿನ ಕೋವಿಡ್-19ಕ್ಕೆ 27 ಮಂದಿ ಸಾವನ್ನಪ್ಪಿದ್ದಾರೆ. ಅಹ್ಮದಾಬಾದ್‌ವೊಂದರಲ್ಲೇ 25 ಜನರು ಮೃತಪಟ್ಟಿದ್ದಾರೆ.
ನಾಗರಿಕರು ದಿನಸಿ ವಸ್ತುಗಳುಹಾಗೂ ತರಕಾರಿ ಖರೀದಿಗೂ ಭಯಪಡುತ್ತಿದ್ದಾರೆ. ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಅಹ್ಮದಾಬಾದ್ ಹಾಗೂ ಸೂರತ್ ಮಹಾನಗರ ಪಾಲಿಕೆಯ ಅಧಿಕಾರಿಗಳು ಒಂದು ವಾರಗಳ ಕಾಲ ಹಾಲು ಹಾಗೂ ಔಷಧ ಮಾರಾಟವನ್ನು ಹೊರತುಪಡಿಸಿ ಎಲ್ಲ ಅಂಗಡಿಮುಗ್ಗಟ್ಟುಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಮೇ 7ರ ಮಧ್ಯರಾತ್ರಿಯಿಂದಲೇ ಆದೇಶ ಜಾರಿಗೆ ಬರಲಿದೆ. ಸೂರತ್‌ನಲ್ಲಿ ಶನಿವಾರದಿಂದ ಆದೇಶ ಜಾರಿಗೆ ಬರಲಿದೆ.
ಗುಜರಾತ್‌ನಲ್ಲಿ ಬುಧವಾರ 382 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಅಹ್ಮದಾಬಾದ್‌ವೊಂದರಲ್ಲೇ 291 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 6,669ಕ್ಕೆ ಏರಿಕೆಯಾಗಿದೆ. ರಾಜ್ಯದೆಲ್ಲೆಡೆ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ 5,559 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದೆ.
ಬುಧವಾರ ರಾಜ್ಯದಲ್ಲಿ ಮೃತಪಟ್ಟಿರುವ 27 ಜನರ ಪೈಕಿ 25 ಮಂದಿ ಅಹ್ಮದಾಬಾದ್‌ನವರಾಗಿದ್ದಾರೆ. ಗುಜರಾತ್‌ನ ಶೇ.70ರಷ್ಟು ಕೋವಿಡ್-19 ಪ್ರಕರಣಗಳು ಅಹ್ಮದಾಬಾದ್‌ನಲ್ಲಿ ದಾಖಲಾಗಿವೆ