ಅನಪೇಕ್ಷಿತ ರೇಸ್‌ನಲ್ಲಿ ಭಾರತ ಗೆಲ್ಲುತ್ತಿದೆ: ರಾಹುಲ್ ಗಾಂಧಿ ಟೀಕೆ

Update: 2020-06-13 04:10 GMT

ಹೊಸದಿಲ್ಲಿ, ಜೂ.13: ಗರಿಷ್ಠ ಕೊರೋನ ವೈರಸ್ ಸೋಂಕಿತ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನಕ್ಕೇರಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಭಯಾನಕ ದುರಂತ; ಇದು ಧಾರ್ಷ್ಟ್ಯ ಮತ್ತು ಅಸಮರ್ಥತೆಯ ಅಪಾಯಕಾರಿ ಸಂಯೋಜನೆಯ ಫಲ ಎಂದು ಬಣ್ಣಿಸಿದ್ದಾರೆ.

ಅನಪೇಕ್ಷಿತ ರೇಸ್‌ನಲ್ಲಿ ಭಾರತ ಗೆಲ್ಲುವತ್ತ ಮುನ್ನಡೆದಿದೆ. ಇದು ಭಯಾನಕ ದುರಂತ; ಧಾರ್ಷ್ಟ್ಯ ಮತ್ತು ಅಸಮರ್ಥತೆಯ ಅಪಾಯಕಾರಿ ಸಂಯೋಜನೆಯ ಫಲ ಇದು ಎಂದು ಭಾರತ ನಾಲ್ಕನೇ ಸ್ಥಾನಕ್ಕೆ ನೆಗೆದಿರುವ ಕುರಿತ ನಕ್ಷೆಯೊಂದಿಗೆ ಟ್ವಿಟ್ಟರ್‌ನಲ್ಲಿ ವಿವರಿಸಿದ್ದಾರೆ.

ಸರ್ಕಾರ ಲಾಕ್‌ಡೌನ್ ಸಡಿಲಿಸುವ ತನ್ನ ಮೊದಲ ಯೋಜನೆಯನ್ನು ಘೋಷಿಸಿದ ಬೆನ್ನಲ್ಲೇ ಈ ಮಾರಕ ಸೋಂಕು ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಬಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News