ಕೊರೋನ ವೈರಸ್ ಗೆ ಔಷಧಿ ಎಂಬ ಪ್ರತಿಪಾದನೆ: ಬಾಬಾ ರಾಮ್ ದೇವ್, ಪತಂಜಲಿ ಸಿಇಒ ವಿರುದ್ಧ ಎಫ್ ಐಆರ್
Update: 2020-06-27 09:36 GMT
ಹೊಸದಿಲ್ಲಿ: ಕೊರೋನ ವೈರಸ್ ಗೆ ತಮ್ಮ ಕಂಪೆನಿಯು ಔಷಧವನ್ನು ಕಂಡು ಹಿಡಿದಿದೆ ಎಂದು ದಾರಿ ತಪ್ಪಿಸುವ ಹೇಳಿಕೆ ನೀಡಿದ ಆರೋಪದಲ್ಲಿ ಬಾಬಾ ರಾಮ್ ದೇವ್, ಪತಂಜಲಿ ಆಯುರ್ವೇದದ ಸಿಇಒ ಆಚಾರ್ಯ ಬಾಲಕೃಷ್ಣ ವಿರುದ್ಧ ಜೈಪುರದ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಬಲ್ಬೀರ್ ಜಾಖರ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ರಾಮ್ ದೇವ್, ಆಚಾರ್ಯ ಬಾಲಕೃಷ್ಣ, ಡಾ. ಬಲ್ಬೀರ್ ಸಿಂಗ್ ತೋಮರ್, ಡಾ. ಅನುರಾಗ್ ತೋಮರ್ ಮತ್ತು ಅನುರಾಗ್ ವರ್ಷ್ನೇ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
“ಆರೋಪಿಗಳು ಜನಸಾಮಾನ್ಯರ ಜೀವವನ್ನು ಅಪಾಯದಲ್ಲಿ ಸಿಲುಕಿಸಿದ್ದಾರೆ. ಕೊರೊನಿಲ್ ಪರೀಕ್ಷೆಗಳ ಬಗ್ಗೆ ರಾಜಸ್ಥಾನ ಸರಕಾರಕ್ಕಾಗಲೀ, ಕೇಂದ್ರ ಸರಕಾರಕ್ಕಾಗಲೀ ಯಾವುದೇ ಮಾಹಿತಿ ನೀಡಿರಲಿಲ್ಲ” ಎಂದು ಜಾಖರ್ ಆರೋಪಿಸಿದ್ದಾರೆ.