"ಎಲ್ಲಾ ಹಬ್ಬಗಳ ಹೆಸರು ಹೇಳಿದ ಪ್ರಧಾನಿ ಮುಸ್ಲಿಮರ ಹಬ್ಬಗಳನ್ನು ಏಕೆ ಉಲ್ಲೇಖಿಸಿಲ್ಲ?"

Update: 2020-07-01 10:04 GMT

ಹೊಸದಿಲ್ಲಿ: ಮಂಗಳವಾರ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ಮುಂಬರುವ ದೀಪಾವಳಿ ಹಾಗೂ ಛತ್ ಪೂಜಾ ಹಬ್ಬಗಳ ಸಲುವಾಗಿ ಬಡವರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು.

“ಜುಲೈ ತಿಂಗಳಿನಿಂದ ಹಬ್ಬಗಳ ಋತು ಆರಂಭಗೊಳ್ಳುತ್ತದೆ, ಜುಲೈ 5ರಂದು ಗುರುಪೂರ್ಣಿಮಾ ಆಚರಿಸಲಾಗುತ್ತದೆ, ನಂತರ ಶ್ರಾವಣ ಮಾಸ ಆರಂಭಗೊಳ್ಳುತ್ತದೆ, ಮುಂದೆ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಓಣಂ, ಕಟಿ ಬಿಹು, ನವರಾತ್ರಿ, ದುರ್ಗಾ ಪೂಜೆ ಹಾಗೂ ದಸರಾ ಬರುತ್ತದೆ,'' ಎಂದು ಹೀಗೆ ಹಬ್ಬಗಳ ಹೆಸರು ಹೇಳುತ್ತಾ ಹೋದ ಪ್ರಧಾನಿ ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಾದ ಈದುಲ್ ಅಝ್ ಹಾ ಹಾಗೂ ಮುಹರ್ರಂ ಅನ್ನು ಬಿಟ್ಟಿದ್ದೇಕೆ ಎಂದು ಹಲವು ಟ್ವಿಟ್ಟರಿಗರು ಪ್ರಶ್ನಿಸಿದ್ದಾರೆ.

“ನರೇಂದ್ರ ಮೋದಿ ಎಲ್ಲಾ ಹಬ್ಬಗಳ ಹೆಸರುಗಳನ್ನು ಉಲ್ಲೇಖಿಸುವಾಗ ಮುಂಬರುವ ಈದ್ ಉಲ್ಲೇಖಿಸಿಲ್ಲ, ದೊಡ್ಡ ವಿಚಾರವೇನಲ್ಲ, ನಮಗೆ ಅದರ ಪರಿವೆಯಿಲ್ಲ. ಆದರೆ ಅದು ಅವರು ಅಗ್ಗದ ಮನಸ್ಥಿತಿಯನ್ನು ಸೂಚಿಸುತ್ತದೆ. ನಾವು ಭಾರತೀಯ ಮುಸ್ಲಿಮರು ಕಳೆದುಕೊಳ್ಳಲು ಏನೂ ಇಲ್ಲ'' ಎಂದು ಒಬ್ಬ ಟ್ವಿಟ್ಟರಿಗ ಪ್ರತಿಕ್ರಿಯಿಸಿದ್ದಾರೆ.

“ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು, ಸಿಖರು ಹಾಗೂ ಬೌದ್ಧರೂ ಇದ್ದಾರೆ ಹಾಗೂ ಅವರಿಗೂ ಹಬ್ಬಗಳ ಆಚರಣೆಯಿದೆ ಎಂದು  ಮರೆತಿದ್ದಾರೆ'' ಎಂದು ಇನ್ನೊಬ್ಬರು ಬರೆದಿದ್ದಾರೆ.

“ಪ್ರಧಾನಿ ಸುಲಭವಾಗಿ ಯಾವುದೇ ಇಸ್ಲಾಮಿಕ್ ಹಬ್ಬವನ್ನು ಉಲ್ಲೇಖಿಸಿಲ್ಲ'', “ಈದ್ ಬಗ್ಗೆ ಏಕಿಲ್ಲ? ಓಹ್ ಅದು ಮುಸ್ಲಿಮರ ಹಬ್ಬವೆಂದು ನನಗೆ ಮರೆತುಹೋಯಿತು, ಇದೇ ಕಾರಣಕ್ಕಾಗಿ ಉಲ್ಲೇಖಿಸಲಾಗಿಲ್ಲ”  ಎಂದು ಇನ್ನೊಬ್ಬ ಟ್ವಿಟ್ಟರಿಗ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News