ವಿವಿಗಳು ಸೆಪ್ಟಂಬರ್ ತಿಂಗಳಲ್ಲಿ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಬಹುದು: ಕೇಂದ್ರ
Update: 2020-07-06 17:57 GMT
ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟಿನ ನಡುವೆಯೇ ವಿಶ್ವವಿದ್ಯಾಲಯಗಳು ಸೆಪ್ಟಂಬರ್ ತಿಂಗಳಲ್ಲಿ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಬಹುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.
“ವಿಶ್ವವಿದ್ಯಾಲಯಗಳು ಸೆಪ್ಟಂಬರ್ ಕೊನೆಯಲ್ಲಿ ಆಫ್ ಲೈನ್ ಅಥವಾ ಆನ್ ಲೈನ್ ಅಥವಾ ಬ್ರೆಂಡೆಡ್ (ಆನ್ ಲೈನ್+ಆಫ್ ಲೈನ್) ರೀತಿಯಲ್ಲಿ ಟರ್ಮಿನಲ್ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಹುದು” ಎಂದು ಯುಜಿಸಿ ಇಂದು ಪ್ರಕಟಿಸಿದೆ.