ಬಿಜೆಪಿಗೆ ಸೇರ್ಪಡೆಯಾಗಲಾರೆ: ಸಚಿನ್ ಪೈಲಟ್

Update: 2020-07-13 05:48 GMT

ಹೊಸದಿಲ್ಲಿ, ಜು.13: "ನಾನು ಬಿಜೆಪಿಗೆ ಸೇರ್ಪಡೆಯಾಗಲಾರೆ'' ಎಂದು ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಬಂಡೆದ್ದಿರುವ ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸ್ಪಷ್ಟಪಡಿಸಿದ್ದಾರೆ.

ಪೈಲಟ್ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರನ್ನು ಇಂದು ಭೇಟಿಯಾಗುವ ಸಾಧ್ಯತೆಯಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಸಚಿನ್ ಪೈಲಟ್  ಎನ್‌ಡಿಟಿವಿಗೆ ಈ ಸ್ಪಷ್ಟನೆ ನೀಡಿದರು.

ಪೈಲಟ್ ಇದೀಗ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದು, ಜೈಪುರದಲ್ಲಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನೆಯಲ್ಲಿ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಭಾಗವಹಿಸುವುದರಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಅಶೋಕ್ ಗೆಹ್ಲೋಟ್ ಸರಕಾರ ಉಳಿಸಲು 30 ಶಾಸಕರ ಬೆಂಬಲ ಸಾಕಾಗುತ್ತದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ 42ರ ಹರೆಯ ಪೈಲಟ್ ಹೇಳಿದ್ದಾರೆ. ಪೈಲಟ್ ವಾದವನ್ನು ತಿರಸ್ಕರಿಸಿರುವ ಕಾಂಗ್ರೆಸ್ ಪಕ್ಷ ಸರಕಾರಕ್ಕೆ 109 ಶಾಸಕರ ಬೆಂಬಲವಿದೆ. ಪೈಲಟ್ ಬಳಿ ಗರಿಷ್ಟ 16 ಶಾಸಕರಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News