ಬೈಪಾಸ್ ಸರ್ಜರಿಯಿಂದ ರಾಷ್ಟ್ರಪತಿ ಕೋವಿಂದ್ ಚೇತರಿಕೆ, ಐಸಿಯುನಿಂದ ಸ್ಥಳಾಂತರ

Update: 2021-04-03 07:24 GMT

ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ಶನಿವಾರ ಏಮ್ಸ್ ಆಸ್ಪತ್ರೆಯ ಐಸಿಯುನಿಂದ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿದೆ.

ಮಾರ್ಚ್ 30ರಂದು ನಡೆಸಲಾಗಿರುವ ಬೈಪಾಸ್ ಸರ್ಜರಿಯಿಂದ ರಾಷ್ಟ್ರಪತಿ ಕೋವಿಂದ್ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ರಾಷ್ಟ್ರಪತಿ ಭವನ ಶನಿವಾರ ತಿಳಿಸಿದೆ.

ಅವರ ಆರೋಗ್ಯವು ನಿರಂತರವಾಗಿ ಸುಧಾರಿಸುತ್ತಿದೆ. ವೈದ್ಯರು ಅವರ ಸ್ಥಿತಿಯನ್ನು ನಿರಂತರವಾಗಿ ಮೇಲ್ಚಿಚಾರಣೆ ನಡೆಸುತ್ತಿದ್ದಾರೆ. ವಿಶ್ರಾಂತಿ  ಪಡೆಯಲು ಸಲಹೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಭವನವು ಟ್ವೀಟ್ ಮಾಡಿದೆ.

ತಾನೀಗ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ವೈದ್ಯರು ಹಾಗೂ ಶುಶ್ರೂಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕೋವಿಂದ್ ಹೇಳಿದ್ದರು.

ಶೀಘ್ರವೇ ಚೇತರಿಸಿಕೊಳ್ಳುವಂತೆ ದೇಶ ಹಾಗೂ ವಿದೇಶಗಳಿಂದ ಸಂದೇಶಗಳು ನನಗೆ ಬಂದಿದ್ದವು. ಎಲ್ಲರಿಗೂ ಕೃತಜ್ಞತೆಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ ಎಂದು 75 ವರ್ಷ ವಯಸ್ಸಿನ ಕೋವಿಂದ್ ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಕೋವಿಂದ್‍ಗೆ ಎದೆಯಲ್ಲಿ ಅಸ್ವಸ್ಥತೆ ಕಂಡುಬಂದ ಕಾರಣ ತಪಾಸಣೆಗಾಗಿ ದಿಲ್ಲಿಯ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News