ವೆಂಟಿಲೇಟರ್ ಅಳವಡಿಕೆ, ಕಾರ್ಯಾಚರಣೆಯ ಕುರಿತು ಲೆಕ್ಕಪರಿಶೋಧನೆಗೆ ಪ್ರಧಾನಿ ಆದೇಶ

Update: 2021-05-15 09:56 GMT

ಹೊಸದಿಲ್ಲಿ: ಕೇಂದ್ರ ಸರಕಾರವು ರಾಜ್ಯಗಳಿಗೆ ಒದಗಿಸಿರುವ ವೆಂಟಿಲೇಟರ್‌ಗಳ ಅಳವಡಿಕೆ ಹಾಗೂ ಅದರ  ಕಾರ್ಯಾಚರಣೆಯ ಕುರಿತಂತೆ ತಕ್ಷಣವೇ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಆದೇಶಿಸಿದರು.

"ಕೆಲವು ರಾಜ್ಯಗಳಲ್ಲಿ ವೆಂಟಿಲೇಟರ್ ಗಳು ಗೋದಾಮುಗಳಲ್ಲೆ ಬಳಕೆಯಾಗದೇ ಉಳಿದಿರುವ ಬಗ್ಗೆ ಕೆಲವು ವರದಿಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದರು. ಕೇಂದ್ರ ಸರಕಾರವು ಒದಗಿಸಿರುವ ವೆಂಟಿಲೇಟರ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆಯ  ಕುರಿತಾಗಿ ತಕ್ಷಣವೇ ಲೆಕ್ಕಪರಿಶೋಧನೆಯನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಅಗತ್ಯವಿದ್ದರೆ ಆರೋಗ್ಯ ಕಾರ್ಯಕರ್ತರಿಗೆ ವೆಂಟಿಲೇಟರ್‌ಗಳನ್ನು ಆಪರೇಟಿಂಗ್  ಮಾಡುವ ಕುರಿತು ತರಬೇತಿ ಒದಗಿಸಬೇಕು ”ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸಭೆಯಲ್ಲಿ, ಪ್ರಧಾನಿ ಹೇಳಿಕೆಯ ಪ್ರಮುಖ ಅಂಶಗಳು:

*ಹೆಚ್ಚಿನ ಕೊರೋನ ಪಾಸಿಟಿವಿಟಿ ದರವನ್ನು ಹೊಂದಿರುವ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ

*ಮನೆ ಮನೆಗೆ ತೆರಳಿ ಪರೀಕ್ಷೆ ಹಾಗೂ ಕಣ್ಗಾವಲು ಕೇಂದ್ರೀಕರಿಸಲು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು

*ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆಯ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News