ದಿಲ್ಲಿ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಬಂಧಿತ ಪ್ರತಿಭಟನಕಾರರಿಗೆ ತಲಾ 2 ಲಕ್ಷ ರೂ. ಘೋಷಿಸಿದ ಪಂಜಾಬ್ ಸಿಎಂ ಚನ್ನಿ

Update: 2021-11-12 18:10 GMT

ಹೊಸದಿಲ್ಲಿ: ಈ ವರ್ಷ ಗಣರಾಜ್ಯೋತ್ಸವದಂದು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸಿದ ಟ್ರ್ಯಾಕ್ಟರ್ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದಾಗ ದಿಲ್ಲಿ ಪೊಲೀಸರು ಬಂಧಿಸಿದ 83 ಪ್ರತಿಭಟನಕಾರರಿಗೆ ಪರಿಹಾರವಾಗಿ 2 ಲಕ್ಷ ರೂಪಾಯಿ ನೀಡಲು ಪಂಜಾಬ್ ಸರಕಾರ ನಿರ್ಧರಿಸಿದೆ.

ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ರೈತ ಸಂಘಗಳ ಬೇಡಿಕೆಗಳನ್ನು ಎತ್ತಿ ತೋರಿಸಲು ಈ ವರ್ಷ ಜನವರಿ 26 ರಂದು ನಡೆದ ಟ್ರಾಕ್ಟರ್ ರ್ಯಾಲಿ ನಡೆದಿತ್ತು.  ಆದರೆ ಸಾವಿರಾರು ಪ್ರತಿಭಟನಾಕಾರರು ತಡೆಗೋಡೆಗಳನ್ನು ಭೇದಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿ, ವಾಹನಗಳನ್ನು ಉರುಳಿಸುವ ಮೂಲಕ ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಅರಾಜಕತೆಗೆ ಸೃಷ್ಟಿಯಾಗಿತ್ತು.

ಪ್ರತಿಭಟನೆಗಳಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿರುವ ಚುನಾವಣೆಗೆ ಒಳಪಟ್ಟಿರುವ ಪಂಜಾಬ್‌ನಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಬಲವಾದ ಬೆಂಬಲವಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಚರನ್ ಜೀತ್ ಸಿಂಗ್ ಚನ್ನಿ ಅವರು ಬಂಧಿತ 83 ಜನರನ್ನು ಬೆಂಬಲಿಸಿದ್ದಾರೆ.

"ಮೂರು ಕಪ್ಪು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ  ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನನ್ನ ಸರಕಾರದ ನಿಲುವನ್ನು ಪುನರುಚ್ಚರಿಸುತ್ತಾ 2021 ರ ಜನವರಿ 26 ರಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿದ್ದಕ್ಕಾಗಿ ದಿಲ್ಲಿ  ಪೊಲೀಸರು ಬಂಧಿಸಿದ 83 ಜನರಿಗೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ನಾವು ನಿರ್ಧರಿಸಿದ್ದೇವೆ’’ ಎಂದು ಪಂಜಾಬ್ ಮುಖ್ಯಮಂತ್ರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News