ನೆಹರೂ ಹೊನ್ನುಡಿಗಳು
ಮಕ್ಕಳ ಕಾಳಜಿ
ಮಕ್ಕಳು ಹೂದೋಟದಲ್ಲಿರುವ ಮೊಗ್ಗುಗಳಂತೆ. ಅವರು ದೇಶದ ಭವಿಷ್ಯ ಹಾಗೂ ನಾಳಿನ ಪ್ರಜೆಗಳಾಗಿರುವುದರಿಂದ ಅವರನ್ನು ಅತ್ಯಂತ ಕಾಳಜಿಯಿಂದ ಹಾಗೂ ಅಕ್ಕರೆಯಿಂದ ಪೋಷಿಸಬೇಕಾಗಿದೆ.
.........................................
ಭಿನ್ನಾಭಿಪ್ರಾಯದ ಗ್ರಹಿಕೆಗಳು ನಿವಾರಣೆಯಾಗಲಿ
ದೇಶದ ಎಲ್ಲಾ ಅಲ್ಪಸಂಖ್ಯಾತರಲ್ಲಿ ಈ ದೇಶವು ತಮ್ಮ ಮನೆಯೆಂಬ ಭಾವನೆಯನ್ನು ಪರಿಪೂರ್ಣವಾಗಿ ಮೂಡುವಂತೆ ಮಾಡುವುದು ಹಾಗೂ ತಥಾಕಥಿತ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ನಡುವಿನ ರಾಜಕೀಯ ದೃಷ್ಟಿಕೋನದಲ್ಲಿ ಎಲ್ಲಾ ರೀತಿಯ ಭಿನ್ನಾಭಿಪ್ರಾಯದ ಗ್ರಹಿಕೆಗಳನ್ನು ನಿವಾರಿಸುವುದೇ ಭಾರತವನ್ನು ಬಲಪಡಿಸಲು ಇರುವ ಏಕೈಕ ದೀರ್ಘಕಾಲೀನ ನೀತಿಯಾಗಿದೆ.
.........................................
ಶಾಂತಿಯಿಲ್ಲದಿದ್ದರೆ...
ಶಾಂತಿಯಿಲ್ಲದೆ ಇದ್ದಲ್ಲಿ ಎಲ್ಲಾ ಕನಸುಗಳು ಮಾಯವಾಗುತ್ತವೆ ಹಾಗೂ ಭಸ್ಮವಾಗಿ ಬಿಡುತ್ತವೆ.
.........................................
ಫಲ ಖಚಿತ
ಮಹಾನ್ ಉದ್ದೇಶಕ್ಕಾಗಿ ನಿಷ್ಠೆಯಿಂದ ಹಾಗೂ ದಕ್ಷತೆಯಿಂದ ಮಾಡುವ ಕೆಲಸವು ತಕ್ಷಣವೇ ಪರಿಗಣಿಸಲ್ಪಡದೆ ಹೋದರೂ, ಕಟ್ಟಕಡೆಗೆ ಅದು ಫಲ ನೀಡುತ್ತದೆ.