ಕ್ವೆಸ್ಟ್ ಕನಸಿನ ಮನೆ: ಕೀಲಿಕೈ ಹಸ್ತಾಂತರ

Update: 2021-12-12 13:20 GMT

ಗದಗ: ಉತ್ತರ ಕರ್ನಾಟಕದ ಗದಗಿನ ಜಿಲ್ಲೆಯ ಸೀತಾಲಹರಿ ಎಂಬ ಸಣ್ಣ ಗ್ರಾಮದ ಒಂದು ಬಡ ನಿರ್ಗತಿಕ ಕುಟುಂಬಕ್ಕೆ ಕ್ವೆಸ್ಟ್ ಫೌಂಡೇಶನ್ ಮನೆ ನಿರ್ಮಿಸಿ ಕೊಟ್ಟಿದೆ. ಕ್ವೆಸ್ಟ್ ಸಂಸ್ಥಾಪಕರಾದ ಜಾಫರ್ ನೂರಾನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದಗ ಪ್ರಮೋಶನ್ ಕೌನ್ಸಿಲ್ ಸಲಹೆಗಾರ ಬಶೀರ್ ಹಾಜಿ ಕುಂಬ್ರ ಮನೆಯ ಕೀಲಿಕೈ ಕುಟುಂಬಕ್ಕೆ ಹಸ್ತಾಂತರಿಸಿದರು. 

ಕಳೆದ ಹಲವಾರು ವರ್ಷಗಳಿಂದ ಪಾಳುಬಿದ್ದ ಮನೆಯಲ್ಲಿ ಈ ಬಡ ಕುಟುಂಬ ತಂಗುವ ಶೋಚನೀಯ ಸ್ಥಿತಿ ತಿಳಿದು ಕ್ವೆಸ್ಟ್ ಗದಗ ಕಾರ್ಯಕರ್ತರು ಅಲ್ಲಿ ಆಗಮಿಸಿ ಕನಸಿನ ಮನೆ ನಿರ್ಮಿಸಿಕೊಟ್ಟರು.

ನೂತನ ಮನೆ ಉದ್ಘಾಟನಾ ಸಮಾರಂಭದಲ್ಲಿ ಕ್ವೆಸ್ಟ್ ಫೌಂಡೇಶನ್ ಸಹ-ಸಂಸ್ಥಾಪಕ ಹಬೀಬುಲ್ಲಾ ಸಖಾಫಿ, ಕ್ವೆಸ್ಟ್ ಡಿ.ಜಿ ಸಯ್ಯಿದ್ ಮಿದ್ಲಾಜ್ ಬಾ-ಅಲವಿ, ಮೌಲಾ ಸಾಬ್ ಸಿದ್ಧಾಪುರ, ವಾಣಿಜ್ಯ ಸಂಘಟನೆಯ ಅಧ್ಯಕ್ಷ ವಿ.ಎ.ಮುಹಮ್ಮದ್ ಹಾಜಿ ಗಂಗಾವತಿ, ಪಂಚಾಯತ್ ಅಧ್ಯಕ್ಷ ಹೊನ್ನಪ್ಪ, ಹಾಜಿ ಗುಲಾಂ ಹುಸೇನ್ ಬನ್ನೂರು, ಸಯ್ಯಿದ್ ಎಸ್.ಬಿ. ಖಾದಿರಿ ಫಕ್ರುದ್ದೀನ್ ಸಾಬ್ ಗಂಗಾವತಿ, ಸಲೀಂ ಮುಲ್ಲಾ ಮುಂತಾದವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ
ಕಥೆಗಾರ