ವಿಕಲಚೇತನರ ಬಸ್‍ಪಾಸ್‍ಗಳಿಗೆ ಫೆ.28ರವರೆಗೆ ಮಾನ್ಯ

Update: 2021-12-28 14:35 GMT

ಬೆಂಗಳೂರು, ಡಿ.28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ಗಳಲ್ಲಿ ಪ್ರಯಾಣಿಸಲು 2021ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್‍ಪಾಸ್‍ಗಳನ್ನು ಫೆ.28ರವರೆಗೆ ಮಾನ್ಯ ಮಾಡಲಾಗುವುದು ಎಂದು ಕೆಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳ ವಿತರಣೆ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಜ.17ರಿಂದ ಅವಕಾಶ ಕಲ್ಪಿಸಲಾಗುವುದು. ಹಾಗಾಗಿ ಫೆ.28ರವರೆಗೆ 2021ನೇ ಸಾಲಿನ ಪಾಸ್‍ಗಳನ್ನು ಮಾನ್ಯ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News