ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ವೇಳಾಪಟ್ಟಿ ಪ್ರಕಟ
Update: 2022-02-01 17:50 GMT
ಬೆಂಗಳೂರು, ಫೆ.1: 2021ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೇಳಾಪಟ್ಟಿ ಮತ್ತು ಶುಲ್ಕದ ಮಾಹಿತಿ ಪ್ರಕಟಿಸಿದೆ.
ಈ ಹಿಂದೆ ಖಾಸಗಿ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಮತ್ತು ಸರಕಾರದ ನಡುವೆ ನಡೆದ ಸಭೆಯ ಪ್ರಕಾರ ವೈದ್ಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಸರಕಾರಿ ಕೋಟಾ ಸೀಟುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ.
ಖಾಸಗಿ ಕೋಟಾ ಸೀಟುಗಳಿಗೆ 18ರಿಂದ 20 ಲಕ್ಷ ರೂ., ಎನ್‍ಆರ್‍ಐ ಕೋಟಾ ಸೀಟುಗಳಿಗೆ 32 ಲಕ್ಷ ರೂ.ಗಳಿಂದ 34 ಲಕ್ಷರೂ. ಪಾವತಿಸಬೇಕಿದೆ. ಇನ್ನುಳಿದ ಕೋಟಾದ ಸೀಟುಗಳಿಗೂ ಶುಲ್ಕ ನಿಗದಿ ಮಾಡಲಾಗಿದೆ. ಸಂಪೂರ್ಣ ಶುಲ್ಕದ ಮಾಹಿತಿ ಇತರ ವಿವರಗಳನ್ನು http://kea.kar.nic.in ವೆಬ್‍ಸೈಟ್‍ನಲ್ಲಿ ನೋಡಬಹುದುಎಂದು ಪರೀಕ್ಷಾ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.