ಬೇಂದ್ರೆ ಕನ್ನಡದ ಅದ್ಭುತ ಕಾವ್ಯ ಪ್ರತಿಭೆ: ಡಾ.ವೆಂಕಟೇಶ್

Update: 2022-02-09 14:27 GMT

ಉಡುಪಿ, ಫೆ.9: ದ.ರಾ. ಬೇಂದ್ರೆ ಅವರದು ದಾರ್ಶನಿಕ ಪ್ರತಿಭೆ. ಎಲ್ಲಾ ರೀತಿಯ ಸಾಮಾಜಿಕ ವಿಚಾರಗಳು ಅವರ ಕಾವ್ಯದಲ್ಲಿ ಅಭಿವ್ಯಕ್ತಗೊಂಡಿವೆ. ಜಾನಪದ ಸೊಗಡು ಮತ್ತು ಆಧುನಿಕತೆಯ ಸ್ಪರ್ಶ ಎರಡನ್ನು ಅವರ ಕಾವ್ಯದಲ್ಲಿ ಗುರುತಿಸಬಹುದು. ಅವರೊಬ್ಬ ಕನ್ನಡದ ಅದ್ಭುತ ಕಾವ್ಯ ಪ್ರತಿಭೆ ಎಂದು ಚಿಂತಕ ಡಾ.ಹೆಚ್.ಕೆ. ವೆಂಕಟೇಶ್ ಹೇಳಿದ್ದಾರೆ.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಆಶ್ರಯದಲ್ಲಿ ನಡೆದ ಬೇಂದ್ರೆ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಬೇಂದ್ರೆಯವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಜಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಬೇಂದ್ರೆ ಅವರ ಬದುಕು ಬರಹಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತವೆ ಎಂದರು.

ಕನ್ನಡ ವಿಭಾಗ ಪ್ರಾದ್ಯಾಪಕರಾದ ಪ್ರೊ. ರಾಧಾಕೃಷ್ಣ, ರತ್ನಮಾಲಾ, ಶಾಲಿನಿ, ಅರ್ಚನಾ, ಐಕ್ಯೂಎಸಿ ಸಂಚಾಲಕ ಡಾ. ಸುರೇಶ್ ರೈ ಉಪಸ್ಥಿತರಿದ್ದರು. ಕನ್ನಡ ವಿಭಾಗದ ನಿಖೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಬೇಂದ್ರೆ ಬದುಕು-ಬರಹದ ಕುರಿತು ರಸಪ್ರಶ್ನೆ ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News