ಆಧಾರ್ ಕಾರ್ಡ್ ಕಳೆದುಹೋದರೆ ಡೂಪ್ಲಿಕೇಟ್ ಆಧಾರ್ ಪಡೆಯಲು ಹಂತ ಹಂತದ ಮಾಹಿತಿ ಇಲ್ಲಿದೆ
ಕೋವಿಡ್ -19 (Covid-19) ಸಾಂಕ್ರಾಮಿಕ ರೋಗವು ಜಗತ್ತಿನಲ್ಲಿ ಸಂಕಷ್ಟವನ್ನು ಉಂಟುಮಾಡಿದಾಗಿನಿಂದ, ಆಧಾರ್ ಕಾರ್ಡ್(Aadhaar) ಸೇರಿದಂತೆ ಅನೇಕ ವಿಷಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಯುಐಡಿಎಐ ಬಳಕೆದಾರರಿಗೆ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಅದನ್ನು ಡಿಜಿಟಲ್ ಆಗಿ ಸಂಗ್ರಹಿಸಲು ಕೂಡ ಅವಕಾಶ ಮಾಡಿಕೊಟ್ಟಿತು. ಇದರ ಜೊತೆಗೆ, UIDAI ನೇರ ಲಿಂಕ್ ಅನ್ನೂ ಬಿಡುಗಡೆ ಮಾಡಿದೆ, ಅದರ ಮೂಲಕ ಬಳಕೆದಾರರು ತಮ್ಮ 12-ಅಂಕಿಯ ವಿಶಿಷ್ಟ ID ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
ನೇರ ಆಧಾರ್ ಲಿಂಕ್ -eaadhaar.uidai.gov.in/ ಬಳಸಿಕೊಂಡು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ನೀವು ಆಧಾರ್ ಅನ್ನು ಕಳೆದುಕೊಂಡರೆ ಅದನ್ನು ಡೌನ್‌ಲೋಡ್ ಮಾಡಲು ಹಂತ-ಹಂತದ ಮಾಹಿತಿ ಇಲ್ಲಿದೆ
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - https://uidai.gov.in/
ಹಂತ 2: 'ಗೆಟ್ ಆಧಾರ್' ಅಡಿಯಲ್ಲಿ, ಡೌನ್‌ಲೋಡ್ ಆಧಾರ್ ಆಯ್ಕೆಯನ್ನು ಆರಿಸಿ
ಹಂತ 3: ನಿಮ್ಮ ಆಧಾರ್ ಸಂಖ್ಯೆ ಮತ್ತು ಪ್ರದರ್ಶಿತವಾಗಿರುವ ಭದ್ರತಾ ಕೋಡ್ ಅನ್ನು ನಮೂದಿಸಿ.
ಹಂತ 4: 'ಸೆಂಡ್ OTP' ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಅದನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವೀಕರಿಸುತ್ತೀರಿ.
ಹಂತ 5: OTP ಅನ್ನು ನಮೂದಿಸಿ ಮತ್ತು 'ಪರಿಶೀಲಿಸಿ ಮತ್ತು ಡೌನ್‌ಲೋಡ್' ಕ್ಲಿಕ್ ಮಾಡಿ
ಹಂತ 6: ನಿಮ್ಮ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಆಧಾರ್‌ನ PDF ನಿಮ್ಮ ಫೋನ್‌ನ ಡೌನ್‌ಲೋಡ್ ವಿಭಾಗದಲ್ಲಿ ಇರುತ್ತದೆ.
ಹಂತ 7: PDF ಅನ್ನು ಪಾಸ್‌ವರ್ಡ್‌ನಿಂದ ರಕ್ಷಿಸಲಾಗುತ್ತದೆ. ಅದನ್ನು ತೆರೆಯಲು, ಪಾಸ್ವರ್ಡ್ ಅನ್ನು ನಮೂದಿಸಿ. ಇದು ಎಂಟು ಅಕ್ಷರಗಳಾಗಿರುತ್ತದೆ - ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳ ಸಂಯೋಜನೆ (ಆಧಾರ್ ಪ್ರಕಾರ) ದೊಡ್ಡ ಅಕ್ಷರಗಳಲ್ಲಿ ಮತ್ತು YYYY ಸ್ವರೂಪದಲ್ಲಿ ಹುಟ್ಟಿದ ವರ್ಷ.
ಹಂತ 8: ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಫೋಲ್ಡರ್‌ನಲ್ಲಿ ಇ-ಆಧಾರ್ ಕಾರ್ಡ್ ಅನ್ನು ಉಳಿಸಿಕೊಳ್ಳಿ ಅಥವಾ ಇಮೇಲ್‌ನಲ್ಲಿ ಉಳಿಸಿ.
ಆಧಾರ್‌ಗೆ ಸಂಬಂಧಿಸಿದಂತೆ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ, ನಿಮ್ಮ ಸಹಾಯಕ್ಕಾಗಿ UIDAI ಹಾಟ್‌ಲೈನ್ ಸಂಖ್ಯೆ 1947 ಅನ್ನು ಸಹ ಹೊಂದಿದೆ.