ಉಡುಪಿ: ಬಂಡೀಮಠ ಬಸ್ಸು ನಿಲ್ದಾಣಕ್ಕೆ ಬಸ್‌ಗಳ ಪ್ರವೇಶ ಕಡ್ಡಾಯ
Update: 2022-02-21 13:13 GMT
ಉಡುಪಿ, ಫೆ.21: ಜಿಲ್ಲಾಧಿಕಾರಿಗಳ ಅದೇಶದಂತೆ ಕಾರ್ಕಳ ಬಂಡೀಮಠ ಬಸ್ಸು ನಿಲ್ದಾಣಕ್ಕೆ ಹೋಗಲು ವಿನಾಯಿತಿ ಇರುವ ಬಸ್ಸುಗಳನ್ನು ಹೊರತುಪಡಿಸಿ, ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ಉಳಿದೆಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಂಡೀಮಠ ಬಸ್ಸು ನಿಲ್ದಾಣವನ್ನು ಪ್ರವೇಶಿಸಿ, ಮುಂದುವರಿಯುವಂತೆ ಬಸ್ಸು ಮಾಲಕರಿಗೆ ಸೂಚನೆ ನೀಡಲಾಗಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.