ನೀಲಿ ಆಧಾರ್ ಕಾರ್ಡ್ ಎಂದರೇನು ? ಯಾರಿಗೆ ನೀಡಲಾಗುತ್ತದೆ ? ಇದರ ಪ್ರಾಮುಖ್ಯತೆ ಏನು ಗೊತ್ತೇ?
ದೇಶದಲ್ಲಿ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸ ಮಾಡಲು ತುಂಬಾ ಕಷ್ಟವಾಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳು ಹುಟ್ಟಿದ ಕೂಡಲೇ ಪೋಷಕರು ಮಕ್ಕಳ ಆಧಾರ್ ಕಾರ್ಡ್ ಮಾಡಿಸುವ ಬಗ್ಗೆಯೇ ಚಿಂತಿಸುತ್ತಿದ್ದಾರೆ. ಮಕ್ಕಳಿಗಾಗಿ ಆಧಾರ್ ಕಾರ್ಡ್ ಮಾಡುವ ನಿಯಮದಲ್ಲಿ ಸರ್ಕಾರ ಸಾಕಷ್ಟು ಸಡಿಲಿಕೆ ನೀಡಿದೆ. ಆಧಾರ್ ಕಾರ್ಡ್‌ನ ಸಹಾಯದಿಂದ ಮಕ್ಕಳ ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ಸುಲಭವಾಗಿ ತಯಾರಿಸಲಾಗುತ್ತದೆ.
ನಿಮ್ಮ ಮಗುವಿನ ವಯಸ್ಸು ಐದು ವರ್ಷಕ್ಕಿಂತ ಕಡಿಮೆಯಿದ್ದರೆ, ನೀವು ಮಗುವಿನ ನೀಲಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು. ನಿಯಮಗಳನ್ನು ಬದಲಿಸಿದ ನಂತರ UIDAI ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಅವಕಾಶ ನೀಡಿದೆ. ಉಳಿದ ಆಧಾರ್ ಕಾರ್ಡ್‌ಗಳಿಂದ ಇದನ್ನು ಪ್ರತ್ಯೇಕಿಸಲು, ಇದನ್ನು ನೀಲಿ ಬಣ್ಣದಿಂದ ಮಾಡಲಾಗಿದೆ. ಯುಐಡಿಎಐ ನೀಲಿ ಆಧಾರ್ ಕಾರ್ಡ್ ಅನ್ನು 0 ರಿಂದ 5 ವರ್ಷದ ಮಕ್ಕಳಿಗೆ ನೀಡುತ್ತದೆ .
ಈ ಕಾರ್ಡ್ ಮಾಡಲು, 31 ರೀತಿಯ ಗುರುತಿನ ಚೀಟಿಗಳನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ 14 ಬಗೆಯ ಸಂಬಂಧ ಪುರಾವೆಗಳು, 14 ಬಗೆಯ ಜನನ ಪ್ರಮಾಣ ಪತ್ರಗಳನ್ನು ದಾಖಲೆಗಳಾಗಿ ಸ್ವೀಕರಿಸಬಹುದು. ನೀವು 5 ವರ್ಷದೊಳಗಿನ ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಮಾಡಲು ಬಯಸಿದರೆ, ಮೊದಲನೆಯದಾಗಿ, ನೀಲಿ ಆಧಾರ್ ಕಾರ್ಡಿನ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ-
ಮಕ್ಕಳ ಆಧಾರ್ ಕಾರ್ಡ್ ಈ ಹಿರಿಯರ ಆಧಾರ್ ಕಾರ್ಡ್‌ಗಿಂತ ಭಿನ್ನವಾಗಿದೆ-
5 ವರ್ಷಗಳು ಪೂರ್ಣಗೊಂಡ ನಂತರ, ಅದರ ಮಾನ್ಯತೆ ಕೊನೆಗೊಳ್ಳುತ್ತದೆ.
ಈ ಕಾರ್ಡ್ ಮಾಡಲು ಶಾಲೆಯ ಐಡಿಯನ್ನು ಸಹ ನೀವು ಬಳಸಬಹುದು.
5 ವರ್ಷದ ನಂತರ, ನೀವು ಮಗುವಿನ ಬಯೋಮೆಟ್ರಿಕ್ ಆಧಾರ್ ಡೇಟಾವನ್ನು ನವೀಕರಿಸಬೇಕು
ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್‌ನಿಂದಲೂ ನೀವು ಈ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.
5 ವರ್ಷಗಳ ನಂತರ, ಮಗುವಿನ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಅನ್ನು ಇದಕ್ಕೆ ಸೇರಿಸಬೇಕಾಗುತ್ತದೆ.