ನಿಮ್ಮ ಆಧಾರ್ ಕಾರ್ಡ್ ನಲ್ಲಿನ ಫೋಟೋ ಬದಲಿಸಬೇಕೆ?: ಹಂತ ಹಂತದ ಮಾಹಿತಿ ಇಲ್ಲಿದೆ

Update: 2022-02-28 07:29 GMT
ಸಾಂದರ್ಭಿಕ ಚಿತ್ರ (PTI)

ಭಾರತೀಯರಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಸರ್ಕಾರವು ನೀಡುವ ಪ್ರಯೋಜನಗಳನ್ನು ಪಡೆಯಲು ಈ ದಾಖಲೆ ಅಗತ್ಯವಿದೆ. ವಿವಿಧ ಸರ್ಕಾರಿ ಸ್ವಾಮ್ಯದ ಅಥವಾ ಖಾಸಗಿ ಏಜೆನ್ಸಿಗಳಿಗೆ ತಮ್ಮ ಸೇವೆಗಳನ್ನು ಒದಗಿಸಲು ಆಧಾರ್ ಕಾರ್ಡ್ ಅಗತ್ಯವಿರುತ್ತದೆ.

ಆಧಾರ್ ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿ, ಫೋಟೋ, ಫೋನ್ ಸಂಖ್ಯೆ ಮತ್ತು ವಿಳಾಸದಂತಹ ಕಾರ್ಡ್‌ದಾರರ ಹಲವು ವಿವರಗಳಿವೆ.

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರಸ್ತುತ ಆಧಾರ್ ಸಂಖ್ಯೆಯನ್ನು ನೀಡುತ್ತದೆ.  ಕಾರ್ಡ್‌ದಾರರಿಗೆ ಆಧಾರ್ ಕಾರ್ಡ್‌ನಲ್ಲಿ ಬದಲಾವಣೆಗಳನ್ನು ಮಾಡಲು ಏಜೆನ್ಸಿ ಸಹಾಯ ಮಾಡುತ್ತದೆ.  ಕಾರ್ಡ್‌ದಾರರು ವಿಳಾಸ, ಫೋನ್ ಸಂಖ್ಯೆ, ವಿಳಾಸ ಮತ್ತು ಫೋಟೋ ಮುಂತಾದ ವಿವರಗಳಿಗೆ ಬದಲಾವಣೆಗಳನ್ನು ಮಾಡಲು ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ಕೆಲವು ಸಂದರ್ಭಗಳಲ್ಲಿ, ಕಾರ್ಡುದಾರರು ತಮ್ಮ ಆಧಾರ್ ಕಾರ್ಡ್, 12-ಅಂಕಿಯ ಗುರುತಿನ ಸಂಖ್ಯೆಗೆ ಬದಲಾವಣೆಗಳನ್ನು ಮಾಡಲು ಹತ್ತಿರದ ಆಧಾರ್ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗುತ್ತದೆ.  ಆಧಾರ್ ಕಾರ್ಡ್‌ನಲ್ಲಿನ ವಿವರಗಳನ್ನು ಅಪ್ಡೇಟ್ ಮಾಡಲು ಕಾರ್ಡ್‌ದಾರರು ಆನ್‌ಲೈನ್‌ನಲ್ಲಿ ಅಥವಾ ಆಧಾರ್ ನೋಂದಣಿ ಕೇಂದ್ರಗಳಲ್ಲಿ ನವೀಕರಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.  ಶುಲ್ಕವು ಸೇವೆಯನ್ನು ಅವಲಂಬಿಸಿರುತ್ತದೆ.

ಕಾರ್ಡ್‌ದಾರರು ತಮ್ಮ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ನವೀಕರಣವನ್ನು ಪ್ರಾರಂಭಿಸಿದ ನಂತರ ಅವರಿಗೆ ಸ್ವೀಕೃತಿ ಸಂಖ್ಯೆಯನ್ನು ಒದಗಿಸಲಾಗುತ್ತದೆ.  ಆಧಾರ್ ಕಾರ್ಡ್‌ನಲ್ಲಿನ ವಿವರಗಳನ್ನು ಬದಲಾಯಿಸುವ ಸಂಪೂರ್ಣ ಪ್ರಕ್ರಿಯೆಯು ಗರಿಷ್ಠ 90 ದಿನಗಳನ್ನು ತೆಗೆದುಕೊಳ್ಳುತ್ತದೆ.  ವಿವರಗಳನ್ನು ನವೀಕರಿಸಿದ ನಂತರ, ಕಾರ್ಡ್‌ದಾರರು ಅಧಿಕೃತ UIDAI ಪೋರ್ಟಲ್‌ನಿಂದ ಹೊಸ ಕಾಪಿಯನ್ನು ಡೌನ್‌ಲೋಡ್ ಮಾಡಬಹುದು ಅಥವಾ ಡಾಕ್ಯುಮೆಂಟ್‌ನ ಮುದ್ರಿತ ಆವೃತ್ತಿಯನ್ನು ಆರ್ಡರ್ ಮಾಡಬಹುದು.

ಆಧಾರ್ ಕಾರ್ಡ್‌ನಲ್ಲಿ ಫೋಟೋವನ್ನು ಬದಲಾಯಿಸುವುದು ಹೇಗೆ? - ಮಾಹಿತಿ ಇಲ್ಲಿದೆ:

ಹಂತ 1: ನಿಮ್ಮ ಆಧಾರ್ ಅನ್ನು ನವೀಕರಿಸಲು UIDAI ಅಧಿಕೃತ ವೆಬ್‌ಸೈಟ್‌ https://uidai.gov.in/my-aadhaar/update-aadhaar.html ಗೆ ಭೇಟಿ ನೀಡಿ.

ಹಂತ 2: ಆಧಾರ್ ನೋಂದಣಿ ಫಾರ್ಮ್‌ನಲ್ಲಿ ಸಂಬಂಧಿತ ಮಾಹಿತಿಯನ್ನು ನಮೂದಿಸಿ.

ಹಂತ 3: ಫಾರ್ಮ್‌ನಲ್ಲಿ ಕೇಳಲಾದ ವಿವರಗಳನ್ನು ಪೂರ್ಣಗೊಳಿಸಿ ಮತ್ತು ಅದನ್ನು ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ಸಲ್ಲಿಸಿ.

ಹಂತ 4: ಕೇಂದ್ರದಲ್ಲಿರುವ ಅಧಿಕಾರಿಯು ಹೊಸ ಛಾಯಾಚಿತ್ರವನ್ನು ಕ್ಲಿಕ್ ಮಾಡುತ್ತಾರೆ.

ಹಂತ 5: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ನವೀಕರಿಸಲು ನೀವು ರೂ. 100 ಮತ್ತು GST ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹಂತ 6: ಪಾವತಿಯ ನಂತರ (URN) ಅಪ್‌ಡೇಟ್ ವಿನಂತಿ ಸಂಖ್ಯೆಯೊಂದಿಗೆ ನೀವು ಸ್ವೀಕೃತಿ ಚೀಟಿಯನ್ನು ಪಡೆಯುತ್ತೀರಿ.

ಹಂತ 7: ಫೋಟೋವನ್ನು 90 ದಿನಗಳಲ್ಲಿ ನವೀಕರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News