ಪಾಂಬೂರು ರೆ.ಫಾ.ಹೆನ್ರಿ ಮಸ್ಕರೇನ್ಹಸ್ ಗುರುದೀಕ್ಷೆ ರಜತ ಸಂಭ್ರಮ

Update: 2022-03-01 14:20 GMT

ಶಿರ್ವ, ಮಾ.1: ಬಂಟಕಲ್ಲು ಸಮೀಪದ ಪಾಂಬೂರು ಪವಿತ್ರ ಶಿಲುಬೆಯ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ.ಹೆನ್ರಿ ಮಸ್ಕರೇನ್ಹಸ್‌ರವರ ಗುರು ದೀಕ್ಷೆಯ ರಜತ ಸಂಭ್ರಮ ಕಾರ್ಯಕ್ರಮವು ರವಿವಾರ ಪಾಂಬೂರು ಧರ್ಮ ಕೇಂದ್ರದ ಆವರಣದಲ್ಲಿ ಜರುಗಿತು.

ಧರ್ಮಕೇಂದ್ರದ ಪಾಲನಾ ಮಂಡಳಿ, ವಿವಿಧ ಆಯೋಗಗಳ ಸಮಿತಿ, ಹಾಗೂ ಧರ್ಮಕೇಂದ್ರದ ಬಂಧುಗಳ ವತಿಯಿಂದ ಏರ್ಪಡಿಸಲಾದ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ವಹಿಸಿದ್ದರು.

ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸುವ ಮೂಲಕ ರೆ.ಫಾ.ಹೆನ್ರಿ ಮಸ್ಕರೇನ್ಹಸ್ ಚಾಲನೆ ನೀಡಿದರು. ರೆ.ಫಾ.ಕ್ಯಾನ್ಯೂಟ್ ಬರ್ಬೋಜಾ ಅಭಿನಂದನಾ ಮಾತು ಗಳನ್ನಾಡಿದರು. ಶಿರ್ವ ಆರೋಗ್ಯ ಮಾತಾ ದೇವಾಲಯದ ಹಿರಿಯ ಧರ್ಮ ಗುರು ರೆ.ಫಾ.ಡೆನಿಸ್ ಡೇಸಾ ಶುಭ ಕೋರಿದರು.

20 ಆಯೋಗಗಳ ಸಂಚಾಲಕಿ ಮೇಬಲ್ ಮಿನೇಜಸ್ ಸನ್ಮಾನಪತ್ರ ವಾಚಿಸಿ ದರು. ರೆ.ಫಾ.ರೋಮನ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಡಾ.ವಿನ್ಸೆಂಟ್ ಆಳ್ವ ಸ್ವಾಗತಿಸಿದರು. ಶಿಕ್ಷಕಿ ಅಸುಂತಾ ಡಿಸೋಜ ನಿರೂಪಿಸಿದರು. ಕಾರ್ಯದರ್ಶಿ ಲೂಕಾಸ್ ಡಿಸೋಜ ವಂದಿಸಿದರು. ನಂತರ ಬಂಟಕಲ್ಲು ವಿಜ್ ಧೀರಜ್ ಡಿಸೋಜ ನೇತೃತ್ವದಲ್ಲಿ ಜೀಜೋ ಶಿಕ್ಷಣ ಸಂಸ್ಥೆಯ ಪುಟಾಣಿಗಳಿಂದ ಕಾರ್ಯಕ್ರಮ ವೈವಿದ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News