ಪುಟ್ಟ ಮಕ್ಕಳಿಗಾಗಿ 'ಬಾಲ ಆಧಾರ್ ಕಾರ್ಡ್' ಅನ್ನು ಆಫ್‌ಲೈನ್‌ನಲ್ಲಿ ನೋಂದಾಯಿಸುವ ವಿಧಾನ ಇಲ್ಲಿದೆ...
UIDAI ಪ್ರಾಧಿಕಾರದ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಭಾರತದ ನಿವಾಸಿಗಳಿಗೆ 12 ಸಂಖ್ಯೆಯ ಆಧಾರ್ ಸಂಖ್ಯೆಯನ್ನು ನೀಡುತ್ತದೆ. ಈ ವೇಳೆ ನೋಂದಾಯಿಸಲು ಉದ್ದೇಶಿಸಿರುವ ವ್ಯಕ್ತಿಯು ನೋಂದಣಿ ಪ್ರಕ್ರಿಯೆಯ ಸಂದರ್ಭದಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬೇಕು.
ಹಲವಾರು ಶಾಲೆಗಳು ಪ್ರವೇಶ ಪ್ರಕ್ರಿಯೆಯಲ್ಲಿ ಮಗುವಿನ ಆಧಾರ್ ಸಂಖ್ಯೆಯನ್ನು ಕೇಳುತ್ತವೆ. ಒಂದು ವೇಳೆ ನಿಮ್ಮ ಮಗುವು ಆಧಾರ್ ಹೊಂದಿಲ್ಲದಿದ್ದರೆ, ನೀವು ತಕ್ಷಣ ನಿಮ್ಮ ಮಗುವಿನ ಆಧಾರ್ ಸಂಖ್ಯೆಗೆ ಅರ್ಜಿ ಸಲ್ಲಿಸಬೇಕು. ನವಜಾತ ಶಿಶುಗಳು ಮತ್ತು ಮಕ್ಕಳು ಸೇರಿದಂತೆ ಯಾವುದೇ ವಯಸ್ಸಿನವರು ಬೇಕಾದರೂ ಆಧಾರ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಏನೇನು ಬೇಕಾಗುತ್ತದೆ ?
ಮಗುವಿನ ಜನನ ಪ್ರಮಾಣಪತ್ರದ ನಕಲು ಅಥವಾ ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್.
ಪೋಷಕರ ಆಧಾರ್ ಕಾರ್ಡ್
ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ಆಧಾರ್ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು ಎಂಬುದನ್ನು ಗಮನಿಸಬೇಕು.
5 ವರ್ಷದೊಳಗಿನ ಮಕ್ಕಳಿಗೆ ಆಧಾರ್
ಐದು ವರ್ಷದೊಳಗಿನ ಮಕ್ಕಳನ್ನು ಬಯೋಮೆಟ್ರಿಕ್ಸ್ ಗೆ ಒಳಪಡಿಸುವಂತಿಲ್ಲ. ಹಾಗಾಗಿ, ಫಿಂಗರ್‌ಪ್ರಿಂಟ್‌ಗಳು ಮತ್ತು ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಡೇಟಾವನ್ನು ಮಗುವಿನ ಆಧಾರ್ ಡೇಟಾಬೇಸ್‌ನಲ್ಲಿ ಸೇರಿಸಲಾಗಿಲ್ಲ. ಮಗುವು ಐದು ವರ್ಷವನ್ನು ತಲುಪಿದಾಗ, ಅವನ ಅಥವಾ ಅವಳ ಬಯೋಮೆಟ್ರಿಕ್ಸ್ ಅನ್ನು ನವೀಕರಿಸಬೇಕು.
5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಆಧಾರ್
ಈ ಮಕ್ಕಳು 5 ಮತ್ತು 15 ವರ್ಷಗಳನ್ನು ತಲುಪಿದಾಗ, ಅವರು ಹತ್ತು ಬೆರಳುಗಳು, ಐರಿಸ್ ಸ್ಕ್ಯಾನ್ ಮತ್ತು ಅವರ ಮುಖದ ಛಾಯಾಚಿತ್ರವನ್ನು ಒಳಗೊಂಡಿರುವ ಅವರ ಬಯೋಮೆಟ್ರಿಕ್ಸ್ ಅನ್ನು ನವೀಕರಿಸಬೇಕಾಗುತ್ತದೆ.
ಬಾಲ ಆಧಾರ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ ಎಂಬುದು ಇಲ್ಲಿದೆ
ಹಂತ 1: ನಿಮ್ಮ ಸ್ಥಳೀಯ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
ಹಂತ 2: ಸೂಕ್ತವಾದ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು 'ಮಕ್ಕಳಿಗೆ ಆಧಾರ್ ಕಾರ್ಡ್' ಅನ್ನು ಆಯ್ಕೆ ಮಾಡಿ.
ಹಂತ 3: ಪೋಷಕರ ಜನ್ಮ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ ಜೊತೆಗೆ ನೀವು ತುಂಬಿಸಿರುವ ಫಾರ್ಮ್ ಅನ್ನು ಸಲ್ಲಿಸಿ. ಅಪಾಯಿಂಟ್ ಮೆಂಟ್ ಪಡೆದುಕೊಳ್ಳಿ
ಹಂತ 4: ಪೋಷಕರ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯಿಂದ ವಿವರಗಳನ್ನು ಒದಗಿಸಬೇಕು.
ಹಂತ 5: ಪರಿಶೀಲನೆ ಪ್ರಕ್ರಿಯೆಯನ್ನು ಅನುಸರಿಸಿ, ಪೋಷಕರ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ.
ಐದು ವರ್ಷದೊಳಗಿನ ಮಕ್ಕಳಿಂದ ಬಯೋಮೆಟ್ರಿಕ್‌ಗಳನ್ನು ಸಂಗ್ರಹಿಸಲಾಗುವುದಿಲ್ಲ. ಛಾಯಾಚಿತ್ರ, ಐರಿಸ್ ಸ್ಕ್ಯಾನ್ ಮತ್ತು ಫಿಂಗರ್‌ಪ್ರಿಂಟ್ ನಂತಹ ಬಯೋಮೆಟ್ರಿಕ್ ಡೇಟಾವನ್ನು ಮಗುವಿಗೆ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ತೆಗೆದುಕೊಳ್ಳಲಾಗುತ್ತದೆ.