ಉಡುಪಿ ಜಿಲ್ಲೆಯ ಇಬ್ಬರು ಕೋವಿಡ್ ಗೆ ಪಾಸಿಟಿವ್

Update: 2022-03-08 15:30 GMT

ಉಡುಪಿ, ಮಾ.8: ಜಿಲ್ಲೆಯಲ್ಲಿ ಇಂದು ಪರೀಕ್ಷೆಗೊಳಪಟ್ಟ 996 ಮಂದಿ ಯಲ್ಲಿ ಕೇವಲ ಇಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ದಿನದಲ್ಲಿ ನಾಲ್ವರು ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಚಿಕಿತ್ಸೆಯಲ್ಲಿರುವವರ ಸಂಖ್ಯೆ 40ಕ್ಕಿಳಿದಿದೆ.

ಇಂದು ತಲಾ ಓರ್ವ ಪುರುಷ ಮತ್ತು ಮಹಿಳೆ ಪಾಸಿಟಿವ್ ಬಂದಿದ್ದು, ಇವರು ಉಡುಪಿ ಮತ್ತು ಕುಂದಾಪುರದವರು. ಇಬ್ಬರೂ ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಒಬ್ಬರು ಮಾತ್ರ ಸದ್ಯ ಆಸ್ಪತ್ರೆಯಲ್ಲಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತಿದಾ್ದರೆ ಎಂದು ಡಿಎಚ್‌ಓ ಪ್ರಕಟಣೆ ತಿಳಿಸಿದೆ.

ದಿನದಲ್ಲಿ ನಾಲ್ವರು ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18471ಕ್ಕೇರಿದೆ. ಇಂದು ಜಿಲ್ಲೆಯ ಒಟ್ಟು 996 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜ.1ರ ಬಳಿಕ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,421ಕ್ಕೇರಿದೆ.

1889 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 1889 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲಿನ 250 ಹಿರಿಯ ನಾಗರಿಕರು ಸೇರಿದಂತೆ ಒಟ್ಟು 274 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 37 ಮಂದಿ ಮೊದಲ ಡೋಸ್ ಹಾಗೂ 1578 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15-18 ವರ್ಷದೊಳಗಿನ 11 ಮಂದಿ ಮೊದಲ ಡೋಸ್ ಹಾಗೂ 432 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News