ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಾವಕಾಶ: ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಜಿ ಆಹ್ವಾನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಲು ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 4 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ಎದುರು ನೋಡುತ್ತಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಮಾರ್ಚ್ 4, 2022 ರಿಂದ ಪ್ರಾರಂಭವಾಗಿದೆ. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, 2022 ಆಗಿದೆ.
SBI ನೇಮಕಾತಿ 2022: ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭವಾದ ದಿನಾಂಕ ಮಾರ್ಚ್ 4, 2022
ಆನ್‌ಲೈನ್ ಅಪ್ಲಿಕೇಶನ್ ಕೊನೆಗೊಳ್ಳುವ ದಿನಾಂಕ: ಮಾರ್ಚ್ 31, 2022
SBI ನೇಮಕಾತಿ 2022: ಹುದ್ದೆಯ ವಿವರಗಳು
ಮುಖ್ಯ ಮಾಹಿತಿ ಅಧಿಕಾರಿ: 1 ಹುದ್ದೆ
ಮುಖ್ಯ ತಂತ್ರಜ್ಞಾನ ಅಧಿಕಾರಿ: 01 ಹುದ್ದೆ
ಉಪ ಮುಖ್ಯ ತಂತ್ರಜ್ಞಾನ ಅಧಿಕಾರಿ (ಇ-ಚಾನೆಲ್‌ಗಳು): 1 ಹುದ್ದೆ
ಉಪ ಮುಖ್ಯ ತಂತ್ರಜ್ಞಾನ ಅಧಿಕಾರಿ (ಕೋರ್ ಬ್ಯಾಂಕಿಂಗ್): 1 ಹುದ್ದೆ
SBI ನೇಮಕಾತಿ 2022: ಅರ್ಹತಾ ಮಾನದಂಡ
ಮುಖ್ಯ ಮಾಹಿತಿ ಅಧಿಕಾರಿ: ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಂಬಿಎ ಪದವಿ ಹೊಂದಿರುವುದು ಹೆಚ್ಚುವರಿ ಅಡ್ವಾಂಟೇಜ್ ಆಗಲಿದೆ.
ಮುಖ್ಯ ತಂತ್ರಜ್ಞಾನ ಅಧಿಕಾರಿ: ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ; ಎಂಬಿಎ ಪದವಿ ಹೊಂದಿರುವುದು ಹೆಚ್ಚುವರಿ ಅಡ್ವಾಂಟೇಜ್ ಆಗಲಿದೆ.
ಉಪ ಮುಖ್ಯ ತಂತ್ರಜ್ಞಾನ ಅಧಿಕಾರಿ (ಇ-ಚಾನೆಲ್‌ಗಳು): ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ; ಎಂಬಿಎ ಪದವಿ ಹೊಂದಿರುವುದು ಹೆಚ್ಚುವರಿ ಅಡ್ವಾಂಟೇಜ್ ಆಗಲಿದೆ..
ಉಪ ಮುಖ್ಯ ತಂತ್ರಜ್ಞಾನ ಅಧಿಕಾರಿ (ಕೋರ್ ಬ್ಯಾಂಕಿಂಗ್): ಸಾಫ್ಟ್‌ವೇರ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಂಬಿಎ ಪದವಿ ಹೊಂದಿರುವುದು ಹೆಚ್ಚುವರಿ ಅಡ್ವಾಂಟೇಜ್ ಆಗಲಿದೆ.
SBI ನೇಮಕಾತಿ 2022: ಅರ್ಜಿ ಶುಲ್ಕ
ಸಾಮಾನ್ಯ, ಇಡಬ್ಲ್ಯೂಎಸ್, ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ 750 ಪಾವತಿಸಬೇಕಾಗುತ್ತದೆ. ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
SBI ನೇಮಕಾತಿ 2022ಕ್ಕೆ ಸಂಬಂಧಿಸಿ ಅರ್ಜಿಗಳನ್ನು ಆನ್‌ಲೈನ್ ನಲ್ಲೇ ಸಲ್ಲಿಸಬೇಕು.