ಕುಂದಾಪುರ: ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Update: 2022-04-12 15:35 GMT

ಉಡುಪಿ, ಎ.೧೨: ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರು-೧೩ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

೧೮ರಿಂದ ೩೫ ವರ್ಷದೊಳಗಿನ, ಕನಿಷ್ಠ ೪ನೇ ತರಗತಿ ತೇರ್ಗಡೆಯಾಗಿರುವ  ಸ್ಥಳೀಯ ಅಭ್ಯರ್ಥಿಗಳು ಸಹಾಯಕಿಯರ ಹುದ್ದೆಗೆ ಮೇ ೨ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ-http://udupi.nic.in- ವೆಬ್‌ಸೈಟ್‌ನ್ನು ಸಂಪರ್ಕಿಸುವಂತೆ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳ ಪ್ರಕಟಣೆ ತಿಳಿಸಿದೆ.

ಉಡುಪಿ: ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಗ್ರಾಪಂ,  ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ ಸೌತ್ ಶಾಲೆ, ಪಡುನಿಟ್ಟೂರು, ಮೂಳೂರು ಯು.ಬಿ.ಎಂ.ಸಿ, ಅಲೆವೂರು, ಕಂಪನಬೆಟ್ಟು, ಕುತ್ಯಾರು ಪಂಚಾಯತ್ ಬಳಿ, ಪಾಂಗಾಳಗುಡ್ಡೆ ಹಾಗೂ ಮಿತ್ರಬೆಟ್ಟು ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗೆ   ೧೮ರಿಂದ ೩೫ ವರ್ಷದೊಳಗಿನ, ಕನಿಷ್ಠ ೪ನೇ ತರಗತಿ ತೇರ್ಗಡೆಯಾದ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮೇ ೨ ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್- http://udupi.nic.in-ಅನ್ನು ಸಂಪರ್ಕಿಸುವಂತೆ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News