ಕಾಂಗ್ರೆಸ್ ಸೇರುತ್ತಾರೆಂಬ ಊಹಾಪೋಹದ ನಡುವೆ ಸೋನಿಯಾ, ರಾಹುಲ್ ಗಾಂಧಿಯನ್ನು ಭೇಟಿಯಾದ ಪ್ರಶಾಂತ್ ಕಿಶೋರ್

Update: 2022-04-16 07:07 GMT
ಪ್ರಶಾಂತ್ ಕಿಶೋರ್ (PTI)

ಹೊಸದಿಲ್ಲಿ : ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಿಶೋರ್ ಕಾಂಗ್ರೆಸ್ ಸೇರುತ್ತಾರೆಂಬ ಊಹಾಪೋಹದ ನಡುವೆ ಈ ಭೇಟಿ ನಡೆದಿದೆ.

2024 ರ ಸಾರ್ವತ್ರಿಕ ಚುನಾವಣೆ ಸೇರಿದಂತೆ ಮುಂಬರುವ ಪ್ರಮುಖ ಚುನಾವಣೆಗಳಿಗಿಂತ ಮೊದಲು ಕಾಂಗ್ರೆಸ್ ಅನ್ನು ಪುನರುತ್ಥಾನಗೊಳಿಸುವ ಪಾತ್ರಕ್ಕಾಗಿ ಕಿಶೋರ್ ಇತ್ತೀಚೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಿದರು.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಯ ಮೇಲೆ ಮಾತುಕತೆಗಳು ಕೇಂದ್ರೀಕೃತವಾಗಿವೆ ಎಂಬ ಕಾಂಗ್ರೆಸ್ ವಾದವನ್ನು ಕಿಶೋರ್ ನಿಕಟವರ್ತಿಗಳು ನಿರಾಕರಿಸಿದ್ದಾರೆ. ಕಾಂಗ್ರೆಸ್ ನಾಯಕತ್ವ ಹಾಗೂ  ಪ್ರಶಾಂತ್ ಕಿಶೋರ್ ಅಥವಾ "ಪಿಕೆ" ಮುಖ್ಯವಾಗಿ 2024 ರ ರಾಷ್ಟ್ರೀಯ ಚುನಾವಣೆಯ ನೀಲನಕ್ಷೆಯ ಕುರಿತು ಚರ್ಚಿಸುತ್ತಿದ್ದಾರೆ ಎಂದು ನಿಕಟವರ್ತಿಗಳು ಹೇಳಿದ್ದಾರೆ.

ಕಳೆದ ವರ್ಷ  ಕಿಶೋರ್ ಹಾಗೂ ಗಾಂಧಿಗಳ ನಡುವಿನ ಮಾತುಕತೆಗಳು ವಿಫಲವಾಗಿದ್ದವು. ಕಾಂಗ್ರೆಸ್ ನಂತರ ತನ್ನ ಚುನಾವಣಾ ಪ್ರಚಾರಗಳನ್ನು ನಿರ್ವಹಿಸಲು ಕಿಶೋರ್ ಅವರ ಮಾಜಿ ಸಹವರ್ತಿಯೊಂದಿಗೆ ಸಹಿ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News