ಕೊಲ್ಲಾಪುರ ಉತ್ತರ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಜಯಭೇರಿ

Update: 2022-04-16 10:17 GMT

ಮುಂಬೈ: ಕೊಲ್ಲಾಪುರ ಉತ್ತರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಜಾಧವ್ 19,000 ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ವಿಧಾನಸಭಾ ಉಪಚುನಾವಣೆಯಲ್ಲಿ ಶನಿವಾರ ನಡೆದ ಮತ ಎಣಿಕೆಯಲ್ಲಿ 19,000 ಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಜಾಧವ್ ವಿಜಯಶಾಲಿಯಾಗಿದ್ದಾರೆ.  ಮಹಾ ವಿಕಾಸ್ ಅಘಾಡಿ (ಎಂವಿಎ) ಒಗ್ಗಟ್ಟಿನ ಮುಂದೆ ಬಿಜೆಪಿ ಮಂಡಿಯೂರಿತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ಕಾಂಗ್ರೆಸ್ ಶಾಸಕ ಚಂದ್ರಕಾಂತ್ ಜಾಧವ್ ಅವರ ಪತ್ನಿ  ಜಯಶ್ರೀ ಜಾಧವ್ ಅವರು ಬಿಜೆಪಿಯ ಸತ್ಯಜಿತ್ ಕದಮ್ ಅವರನ್ನು ಸೋಲಿಸಿದರು, ಪ್ರಚಾರದ ಹಂತದಲ್ಲಿ ಎರಡೂ ಕಡೆಯವರ ನಡುವೆ  ಆರೋಪಗಳು ಮತ್ತು ಪ್ರತ್ಯಾರೋಪಗಳು ನಡೆದವು.

ಛತ್ತೀಸ್‌ಗಢದ ಖೈರಗಢ ವಿಧಾನಸಭಾ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಯಶೋದಾ ನಿಲಂಬರ್ ವರ್ಮಾ ಅವರು ಸುಮಾರು 20,000 ಮತಗಳ ಅಂತರದಿಂದ ಮುಂದಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೋಗಿ) ಶಾಸಕ ದೇವವ್ರತ್ ಸಿಂಗ್ ಅವರ ನಿಧನದಿಂದ ಉಪಚುನಾವಣೆ ಅನಿವಾರ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News