ಪ್ಯಾಶನ್ ಡಿಸೈನಿಂಗ್ ಯಶಸ್ಸಿಗೆ ಜ್ಞಾನ, ನಡವಳಿಕೆ, ದೂರದೃಷ್ಟಿ ಅತೀಮುಖ್ಯ: ಸುಧಾಕರ್

Update: 2022-05-08 18:29 GMT

ಕಾರ್ಕಳ: ಆಧುನಿಕ ಜಗತ್ತಿನಲ್ಲಿ ಪ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಪ್ಯಾಶನ್ ಡಿಸೈನಿಂಗ್ ಬಗ್ಗೆ ಜ್ಞಾನ, ನಡವಳಿಕೆ, ದೂರದೃಷ್ಟಿ ಅತ್ಯಗತ್ಯ. ಇಂದು ಪ್ಯಾಶನ್ ಡಿಸೈನಿಂಗ್ ಗೆ ವಿಪುಲ ಅವಕಾಶಗಳಿವೆ ಹಾಗೂ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗುತ್ತಿವೆ. ಇದರ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಜೇಸಿ ತರಬೇತುದಾರ ಸುಧಾಕರ್ ಕರೆ ನೀಡಿದರು.

ಅವರು ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಕಾರ್ಕಳ ಬಂಗ್ಲೆಗುಡ್ಡೆ ಸಧ್ಭಾವನ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ಯಾಶನ್ ಡಿಸೈನಿಂಗ್ ಬಗ್ಗೆ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಜೀವನದಲ್ಲಿ ಅವಕಾಶವನ್ನು ಉಪಯೋಗಿಸಿಕೊಂಡು ಗುರಿ ತಲುಪುವಂತಹ ಛಲವಿದ್ದರೆ ಖಂಡಿತವಾಗಿಯೂ ನಿಖರವಾದ ಗುರಿಯನ್ನು ಮುಟ್ಟಬಲ್ಲ ಕ್ಷೇತ್ರ ಪ್ಯಾಶನ್ ಡಿಸೈನಿಂಗ್ ಕ್ಷೇತ್ರ ಇಲ್ಲಿ ಪ್ರತಿ ದಿನವು ಪ್ರತಿಸ್ಪರ್ಧಿಗಳಿಂದ ಪ್ರತಿಸ್ಪರ್ದೆ ಉಂಟಾಗುವ ಸಾಧ್ಯತೆಗಳಿವೆ ಇದನ್ನು ನಿಮ್ಮ ಚಾಕಚಕ್ಯತೆ ,ನೈಪುಣ್ಯತೆಯಿಂದ ಸುಲಭವಾಗಿ ಗೆಲ್ಲಬಹುದು ಎಂದರು

ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ,  ಕಾರ್ಕಳ ಶಿರ್ಡಿ ಸಾಯಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಹಾಸ ಸುವರ್ಣ ಮಾತನಾಡಿ, ಪ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಹಲವಾರು ಮಂದಿ ಸಾಧನೆಗಳನ್ನು ಮಾಡಿದ್ದಾರೆ ಎಂದರು.

ಅರುಣೋದಯ ವಿಶೇಷ ಶಾಲೆಯ ಶಿಕ್ಷಕ ಗಿರೀಶ್  ಶುಭ ಹಾರೈಸಿದರು.

ವಸ್ತ್ರವಿನ್ಯಾಸಕ್ಕಾಗಿ ರಾಜ್ಯ ಮಟ್ಟದ ಗೋಲ್ಡನ್ ವುಮನ್ ಅವಾರ್ಡ್ ವಿಜೇತ, ಖ್ಯಾತ ವಸ್ತ್ರವಿನ್ಯಾಸಕಿ, ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ ಆಶ್ರಿತ್ ಪ್ರಸ್ತಾವನೆಗೈದರು.

ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ನ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಸುಪ್ರಿಯಾ ಅವರು ಸ್ವಾಗತಿಸಿದರು. ಕಾದಂಬರಿ ಯವರು ವಂದನಾರ್ಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News