ಛತ್ತೀಸ್‍ಗಢ ರಾಜ್ಯಪಾಲರ ಟ್ವಿಟರ್ ಹ್ಯಾಂಡಲ್ ಹ್ಯಾಕ್!

Update: 2022-05-20 03:57 GMT

ರಾಯಪುರ: ಅಪರಿಚಿತ ವ್ಯಕ್ತಿಗಳು ಛತ್ತೀಸ್‍ಗಢ ರಾಜ್ಯಪಾಲರ ಅಧಿಕೃತ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಿದ್ದು, ಅದನ್ನು ಮತ್ತೆ ಸುರಕ್ಷಿತವಾಗಿಸುವ ಮುನ್ನ ಕೆಲ ಗಂಟೆಗಳ ಅವಧಿಯಲ್ಲಿ ಕ್ರಿಪ್ಟೋಕರೆನ್ಸಿ ಬಗ್ಗೆ ಹ್ಯಾಂಡಲ್‍ನಿಂದ ಪೋಸ್ಟ್ ಮಾಡಲಾಗಿದೆ.

ರಾಜ್ಯಪಾಲ ಅನಸೂಯಾ ಯುಕೀ ಅವರ ಅಧಿಕೃತ ಚಟುವಟಿಕೆಗಳ ಬಗ್ಗೆ ಪ್ರಸಾರ ಮಾಡುವ @GovernorCG  ಟ್ವಿಟರ್ ಹ್ಯಾಂಡಲ್‍ಗೆ ಹ್ಯಾಕರ್‌ ಗಳು ಗುರುವಾರ ಪ್ರವೇಶ ಪಡೆದಿದ್ದಾಗಿ ರಾಜಭವನದ ವಕ್ತಾರರು ದೃಢಪಡಿಸಿದ್ದಾರೆ.

ಈ ಸಂಬಂಧ ರಾಯಪುರದ ಎಸ್‍ಎಸ್‍ಪಿ ಮತ್ತು ಸೈಬರ್ ಸೆಲ್‍ಗೆ ಕೂಡಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ರಾಜಭವನದ ಸೆಕ್ರೇಟ್ರಿಯೇಟ್ ಸ್ಪಷ್ಟಪಡಿಸಿದೆ.

ಸಿವಿಲ್ ಲೇನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್‍ಎಸ್‍ಪಿ ಪ್ರಶಾಂತ್ ಅಗರ್‍ವಾಲ್ ಹೇಳಿದ್ದಾರೆ. ಕಳೆದ ಮಾರ್ಚ್‍ನಲ್ಲಿ ಛತ್ತೀಸ್‍ಗಢದ ಮುಖ್ಯ ಚುನಾವಣಾ ಅಧಿಕಾರಿಯ ಟ್ವಿಟ್ಟರ್ ಹ್ಯಾಂಡಲ್ ಅಲ್ಪ ಅವಧಿಗೆ ಹ್ಯಾಕ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News