ಗೂಗಲ್ ಪೇ, ಫೋನ್‌ಪೇ ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ಹೇಗೆ?
ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ಪಾವತಿಯ ಪ್ರಮುಖ ವಿಧಾನಗಳಲ್ಲಿ ಒಂದಾಗಿದೆ. 2016 ರಲ್ಲಿ ಪ್ರಾರಂಭವಾದ ಈ ವ್ಯವಸ್ಥೆಯು ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಲಿಂಕ್ ಮಾಡಲಾಗುತ್ತದೆ.
ಇದು ಹಣ ವರ್ಗಾವಣೆ ಮತ್ತು ಆನ್‌ಲೈನ್ ಪಾವತಿಗಳನ್ನು ಸುಗಮಗೊಳಿಸುತ್ತದೆ. UPI ರಾಷ್ಟ್ರೀಯ ಪಾವತಿಗಳ ನಿಗಮದ (NPCI) ಅಡಿಯಲ್ಲಿ ಬರುತ್ತದೆ. ಹೊಸ ವೈಶಿಷ್ಟ್ಯವೆಂಬಂತೆ, ಎನ್‌ಸಿಆರ್ ನಿಗಮವು ಯುಪಿಐ ಬಳಸಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಅನುಮತಿಸುವ ವಿಧಾನವನ್ನು ಪರಿಚಯಿಸಿದೆ. ಇದನ್ನು ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ (ICCW) ಎಂದು ಕರೆಯಲಾಗುತ್ತದೆ.
ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ಪ್ರಮುಖ UPI ಅಪ್ಲಿಕೇಶನ್‌ಗಳೊಂದಿಗೆ ಇದನ್ನು ಬಳಸಬಹುದು. ಕಾರ್ಡ್‌ಗಳನ್ನು ಒಯ್ಯುವುದು ಮತ್ತು ಎಟಿಎಂ ಪಿನ್‌ಗಳನ್ನು ನೆನಪಿಟ್ಟುಕೊಳ್ಳುವುದು ಸೇರಿದಂತೆ ಗ್ರಾಹಕರಿಗೆ ಇದು ಬಹಳಷ್ಟು ತೊಂದರೆಗಳನ್ನು ತಪ್ಪಿಸುತ್ತದೆ. ಅಲ್ಲದೆ,ಇದಕ್ಕೆ ಎಟಿಎಂ ಯಂತ್ರ, ಸಕ್ರಿಯ ಇಂಟರ್ನೆಟ್ ಸಂಪರ್ಕದೊಂದಿಗೆ ಯುಪಿಐ ಆಧಾರಿತ ಅಪ್ಲಿಕೇಶನ್ ಮಾತ್ರ ಅಗತ್ಯವಿದೆ. ಹೀಗಿದ್ದರೂ UPI ಬಳಸಿ ಹಿಂಪಡೆಯುವಿಕೆಯ ಗರಿಷ್ಠ ಮಿತಿ 5,000 ರೂ.ಆಗಿದೆ.
UPI ಬಳಸಿ ATM ನಿಂದ ಹಣವನ್ನು ಹಿಂಪಡೆಯುವುದು ಹೇಗೆ?
ಎಟಿಎಂ ಯಂತ್ರಕ್ಕೆ ಭೇಟಿ ನೀಡಿ ಮತ್ತು 'ನಗದನ್ನು ಹಿಂತೆಗೆದುಕೊಳ್ಳಿ'(Withdrawal) ಆಯ್ಕೆಯನ್ನು ಆರಿಸಿ.
ATM ಯಂತ್ರದಿಂದ 'UPI' ಆಯ್ಕೆಯನ್ನು ಆರಿಸಿ.
ATM ಪರದೆಯ ಮೇಲೆ QR ಕೋಡ್ ಅನ್ನು ಪ್ರದರ್ಶಿಸಲಾಗುತ್ತದೆ.
ನಿಮ್ಮ ಮೊಬೈಲ್ ಸಾಧನದಲ್ಲಿ UPI ಆಧಾರಿತ ಪಾವತಿ ಅಪ್ಲಿಕೇಶನ್ ತೆರೆಯಿರಿ ಮತ್ತು QR ಕೋಡ್ ಸ್ಕ್ಯಾನರ್ ತೆರೆಯಿರಿ.
ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನೀವು ನಮೂದಿಸಬಹುದು. ಇದು 5,000 ರೂ.ಗಿಂತ ಹೆಚ್ಚಿರಬಾರದು.
ಈಗ, UPI ಪಿನ್ ನಮೂದಿಸಿ.
'ಹಿಟ್ ಪ್ರೊಸೀಡ್' ಬಟನ್ ಮೇಲೆ ಕ್ಲಿಕ್ ಮಾಡಿ.
ನಂತರ ಹಣ ಪಡೆದುಕೊಳ್ಳಿ.