'ಡಿಪ್ಲೊಮಾ ಪ್ರಿಂಟಿಂಗ್ ಟೆಕ್ನಾಲಜಿ ಕೋರ್ಸ್‌'ಗೆ ಅರ್ಜಿ ಆಹ್ವಾನ

Update: 2022-05-26 09:26 GMT

ಬೆಂಗಳೂರು, ಮೇ 26: ಎಸೆಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುವ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಂದ ಪ್ರಥಮ ಸೆಮಿಸ್ಟರ್‌ 'ಡಿಪ್ಲೊಮಾ ಪ್ರಿಂಟಿಂಗ್ ಟೆಕ್ನಾಲಜಿ ಕೋರ್ಸ್‌' ಪ್ರವೇಶಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆಯ ಸರಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಮೊದಲು ಬಂದ ವಿದ್ಯಾರ್ಥಿಗಳಿಗೆ ಆದ್ಯತೆ, ಅತಿಕಡಿಮೆ ಪ್ರವೇಶ ಶುಲ್ಕ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು, ಕೈಗಾರಿಕಾ ತಜ್ಞರು ಹಾಗೂ ಪರಿಣಿತ ಹಳೆಯ ವಿದ್ಯಾರ್ಥಿಗಳಿಂದಲೇ ತಯಾರಾದ ಹಾಗೂ ವಿದೇಶಿ ಪಠ್ಯಕ್ರಮಗಳಿಗೆ ಸರಿಸಮಾನಾದ ಹೊಸ ಸಿ-20 ಪಠ್ಯಕ್ರಮ. ನುರಿತ ಅನುಭವಿ ಉಪನ್ಯಾಸಕರು, ಸುಸಜ್ಜಿತ ಪ್ರಯೋಗಾಲಯ, ಅತ್ಯುತ್ತಮ ಗ್ರಂಥಾಲಯ ಹಾಗೂ ಉದ್ಯೋಗ ಸಂಬಂಧಿತ ಘಟಕವನ್ನು ಸಂಸ್ಥೆ ಹೊಂದಿದೆ. ಡಿಜಿಟಲ್‌ ಕಲಿಕೆಗಾಗಿ ಸ್ಟಾರ್ಟ್ ಕ್ಲಾಸ್ ರೂಮ್‌ಗಳು ಹಾಗೂ ಕರ್ನಾಟಕ ಎಲ್‌ಎಂಎಸ್ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಾಗುವುದು.

ಕೈಗಾರಿಕೆಗಳಲ್ಲಿ ಕೊನೆಯ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪ್ರಯೋಗಿಕ ಕಲಿಕೆಗೆ ಸದಾವಕಾಶ ಕಲ್ಪಿಸಲಾಗುವುದು, ದೇಶ-ವಿದೇಶ ಕಂಪೆನಿಗಳೊಂದಿಗೆ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಡಿಪ್ಲೋಮಾ ನಂತರ ಎರಡನೆ ವರ್ಷದ ಇಂಜಿನಿಯರಿಂಗ್ ಪದವಿಗೆ ನೇರ ಪ್ರವೇಶ ನೀಡಲಾಗುವುದು.

ಆಸಕ್ತರು ಹೆಚ್ಚಿನ ಮಾಹಿತಿಗೆ ತಾಂತ್ರಿಕ ಶಿಕ್ಷಣ ಇಲಾಖೆ, ಸರಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ, ಅರಮನೆ ರಸ್ತೆ (ಮಹಾರಾಣಿ ಕಾಲೇಜು ಎದುರು), ಬೆಂಗಳೂರು-01 ಅಥವಾ ದೂ.ಸಂಖ್ಯೆ-080-22253914, ಮೊಬೈಲ್  ಸಂಖ್ಯೆ -9448315326, 9743127641 ಸಂಪೆದರ್ಕಿಸಬಹುದು. ಅರ್ಜಿ ಸಲ್ಲಿಸಲು 2022ರ ಜೂನ್ 11ಕ್ಕೆ ಕೊನೆಯ ದಿನವಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ವಿಜಯಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News