ಜೂ.17ರಿಂದ 50ದೇಶಗಳ 150ಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನ
ಉಡುಪಿ, ಜೂ.೧೩: ವಿಶ್ವದ ಸುಮಾರು ೫೦ ದೇಶಗಳ ೧೫೦ಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನ ವನ್ನು ಉಡುಪಿಯ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂ.೧೭ರಿಂದ ಜೂ.೧೯ರವರೆಗೆ ಆಯೋಜಿಸಲಾಗಿದೆ.
ಮುಖವಾಡಗಳು ಕೇವಲ ಚಹರೆಗಳ ಮರೆಮಾಚಲು, ಅಲಂಕಾರಕ್ಕಲ್ಲದೆ ಅರೋಗ್ಯ ವೃದ್ಧಿಸಲು, ಶತ್ರುಬಾಧೆ ಯನ್ನು ನಿವಾರಿಸಲು ಬಳಸಲಾಗುತಿತ್ತು. ಅನೇಕ ಯುದ್ಧಗಳಲ್ಲಿ ಶತ್ರುವಿನ ದಾಳಿಯನ್ನು ತಡೆಯಲು ಉಪಯೋಗಿಸಲಾಗು ತ್ತಿತ್ತು. ಇಂತಹ ಕೆಲವು ಮುಖವಾಡಗಳನ್ನ ಉಡುಪಿ ಭಾಗದ ಕಲಾಸಕ್ತರಿಗೂ ಪರಿಚಯಿಸುವ ದೃಷ್ಟಿಯಿಂದ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮುಖವಾಡ ಸಂಗ್ರಹಕಾರ, ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ.ಕಿರಣ್ ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.
ದಕ್ಷಿಣ ಅಮೇರಿಕ, ಇಟಲಿ, ಶ್ರೀಲಂಕಾ , ಬರ್ಮಾ, ನೇಪಾಳ, ಆಫ್ರಿಕಾ ಮುಂತಾದ ದೇಶಗಳ ಸುಮಾರು ನೂರೈವತ್ತಕ್ಕೂ ಅಧಿಕ ಮುಖವಾಡಗಳನ್ನು ಕಲಾ ಪೂರ್ಣವಾಗಿ ಜೋಡಿಸಿ ಇಡಲಾಗಿದೆ. ಅಧ್ಯಯನ ಆಸಕ್ತರಿಗಾಗಿ ಮುಖವಾಡದ ಸಂಕ್ಷಿಪ್ತ ವಿವರಣೆಯನ್ನೂ ಬರೆದಿಡಲಾಗಿದೆ ಎಂದು ಅವರು ವಿವರಿಸಿದರು.
ಜೂ.೧೬ರಂದು ಸಂಜೆ ೫.೧೫ಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಉದ್ಘಾಟಿಸಲಿದ್ದಾರೆ. ಯೂನಿಯನ್ ಬ್ಯಾಂಕಿನ ಡಿಜಿಎಂ ಡಾ.ಎಚ್.ಟಿ.ಎಂ. ವಾಸಪ್ಪ, ಮುಂಬೈಯ ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಜೂ೧೭ರಿಂದ ಜೂ.೧೯ ರವರೆಗೆ ಬೆಳಗ್ಗೆ ೧೦ ರಿಂದ ಸಂಜೆ ೮ ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.