ಕುಂದಾಪುರ: ಪುರಾತನ ಆನೆ ಕಟ್ಟುವ ಕಂಬ, ಕಲ್ಲಿನ ಕೊಪ್ಪರಿಗೆ ಪತ್ತೆ
Update: 2022-06-24 15:13 GMT
ಕುಂದಾಪುರ : ಪುರಾತನ ಕಾಲದ ಆನೆ ಕಟ್ಟುವ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ ಕೊಪ್ಪರಿಗೆಯೊಂದು ಹೊಸಂಗಡಿ ಪೇಟೆಯಲ್ಲಿ ಪತ್ತೆಯಾಗಿದೆ.
ಆನೆ ಕಟ್ಟುವ ಕಂಬ ಮೊದಲಿನಿಂದಲೂ ಇಲ್ಲಿನ ರಸ್ತೆ ಬದಿಯಲ್ಲಿ ಕಂಡು ಬರುತ್ತಿತ್ತು. ಇದರ ಸುತ್ತ ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ, ಸಮರ್ಥ, ರಿತೀಶ್ ಹಾಗೂ ಅನ್ವಿತ್ ಮಲ್ಯ ಸಂಶೋಧನೆ ನಡೆಸಿದಾಗ ಮಣ್ಣಿನಲ್ಲಿ ಹೂತು ಹೋಗಿದ್ದ ಆನೆಗೆ ನೀರಿಡುವ ಕೊಪ್ಪರಿಗೆ ಕಂಡುಬಂದಿದೆ.
ಇವು ಸುಮಾರು 100 ವರ್ಷಗಳಿಗೂ ಹಿಂದಿನ ಕಾಲದ ರಾಜರ ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ ಕೊಪ್ಪರಿಗೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಕೆಳದಿ ಶಿವಪ್ಪ ನಾಯಕನ ಕಾಲದ ಹೊನ್ನಯ್ಯ ಅರಸ ಮನೆತನದವರು ಆಳ್ವಿಕೆ ನಡೆಸಿದ್ದು, ಇದು ಅವರ ಕಾಲ ದಲ್ಲಿಯೇ ನಿರ್ಮಿಸಿರಬಹುದು ಎಂದು ತಿಳಿದು ಬಂದಿದೆ.