ಉಡುಪಿ ಜಿಲ್ಲೆಯ ಆರು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
ಉಡುಪಿ : ಶನಿವಾರವೂ ಜಿಲ್ಲೆಯ ಆರು ಮಂದಿ ಹೊಸದಾಗಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ಇಂದು ಏಳು ಮಂದಿ ಸೋಂಕಿನಿಂದ ಚೇತರಿಸಿಕೊಳ್ಳುವ ಮೂಲಕ ಸದ್ಯ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ೨೦ಕ್ಕಿಳಿದಿದೆ.
ಇಂದು ಪರೀಕ್ಷೆಗೊಳಗಾದ ೨೪೭ ಮಂದಿಯಲ್ಲಿ ಪಾಸಿಟಿವ್ ಬಂದ ಆರು ಮಂದಿಯೂ ಪುರುಷರಾಗಿದ್ದಾರೆ. ಸೋಂಕು ಪತ್ತೆಯಾದವರಲ್ಲಿ ಐವರು ಉಡುಪಿ ತಾಲೂಕಿನವರಾದರೆ, ಒಬ್ಬರು ಕುಂದಾಪುರ ತಾಲೂಕಿನವರು. ಪಾಸಿಟಿವ್ ಬಂದ ಆರು ಮಂದಿಯಲ್ಲಿ ಐವರು ಅವರವರ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ.
ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ 20 ಮಂದಿಯಲ್ಲಿ ಮೂವರು ಆಸ್ಪತ್ರೆಗಳ ಲ್ಲಿದ್ದಾರೆ. ಒಬ್ಬರು ಐಸಿಯುನಲ್ಲಿದ್ದರೆ, ಇನ್ನೊಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ. ಮತ್ತೊಬ್ಬರಿಗೆ ಎಚ್‌ಡಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಉಡುಪಿ ತಾಲೂಕಿನ ೧೮೫ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಯಿತು. ಅಲ್ಲದೇ ಕುಂದಾಪುರ ತಾಲೂಕಿನ ೩೮ ಮಂದಿ ಹಾಗೂ ಕಾರ್ಕಳ ತಾಲೂಕಿನ ೨೪ ಮಂದಿಯನ್ನು ಸಹ ಕೋವಿಡ್‌ಗಾಗಿ ಪರೀಕ್ಷಿಸಲಾಗಿದೆ.