ಕಾನ್‍ಸ್ಟೇಬಲ್ ಹಾಗೂ ಚಾಲಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು, ಜು. 14: ಕೇಂದ್ರ ಸರಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಕಾನ್‍ಸ್ಟೇಬಲ್(ಚಾಲಕ-ಪುರುಷ) ದಿಲ್ಲಿ ಪೆÇಲೀಸ್ ಪರೀಕ್ಷೆ-2022ಕ್ಕೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜು.29ಕ್ಕೆ ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು 2022ರ ಜುಲೈ 1ಕ್ಕೆ ವಯೋಮಿತಿ 21ರಿಂದ 30 ವರ್ಷದೊಳಗಿರಬೇಕು. (ಅಂದರೆ ಅಭ್ಯರ್ಥಿಗಳು 1992ರ ಜುಲೈ 2ರ ಮೊದಲು ಹಾಗೂ 2001ರ ಜುಲೈ 1ರ ನಂತರ ಜನಿಸಿರಬಾರದು) ಹಿರಿಯ ಸೆಕೆಂಡರಿ/ಪಿಯುಸಿ ವಿದ್ಯಾರ್ಹತೆಯನ್ನು ಅಂಗೀಕೃತ ಮಂಡಳಿಯಿಂದ ಉತ್ತೀರ್ಣ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು. ಬಾರೀ ವಾಹನಗಳನ್ನು ಆತ್ಮವಿಶ್ವಾಸದಿಂದ ಓಡಿಸುವಂತಿರಬೇಕು. ಭಾರೀ ಮೋಟಾರು ವಾಹನಗಳಿಗೆ ಮಾನ್ಯವಾದ ಚಾಲನಾ ಪರವಾನಿಗೆ ಹೊಂದಿರಬೇಕು. ವಾಹನಗಳ ನಿರ್ವಹಣೆಯ ಜ್ಞಾನವನ್ನು ಹೊಂದಿರಬೇಕು.
ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಮಾದರಿಯಲ್ಲಿರುತ್ತದೆ. ಅರ್ಜಿ ಸಲ್ಲಿಸಲು ವೆಬ್‍ಸೈಟ್ https://ssc.nic.in ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://ssc.nic.in ಮತ್ತು https://ssckkr.nic.in ಹಾಗೂ ದೂರವಾಣಿ ಸಂಖ್ಯೆ 080-25502520, 9483862020 ಅನ್ನು ಸಂಪರ್ಕಿಸಬಹುದು ಎಂದು ಅಧೀಕೃತ ಪ್ರಕಟನೆ ತಿಳಿಸಿದೆ.