ತಾನು ಉಪರಾಷ್ಟ್ರಪತಿಯಾಗಲು ಬಯಸಿದ್ದೇನೆಂಬ ಬಿಜೆಪಿ ಹೇಳಿಕೆಗೆ ನಿತೀಶ್ ಕುಮಾರ್ ತಿರುಗೇಟು
ಪಾಟ್ನಾ: 'ತಾನು ಉಪರಾಷ್ಟ್ರಪತಿಯಾಗಲು ಬಯಸಿದ್ದೆ' ಎಂಬ ಬಿಜೆಪಿ ನಾಯಕರೊಬ್ಬರ ಹೇಳಿಕೆಯನ್ನು ತಿರಸ್ಕರಿಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಹೇಳಿಕೆಯು 'ತಮಾಷೆ ಹಾಗೂ ಬೋಗಸ್' ಎಂದು ಕರೆದಿದ್ದಾರೆ ಎಂದು NDTV ವರದಿ ಮಾಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಕುಮಾರ್ ಅವರ ಜೆಡಿಯು ಪಕ್ಷದ ಕೆಲವರು ನನ್ನಲ್ಲಿ ವಿನಂತಿಸಿದ್ದರು ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿಕೆ ನೀಡಿದ್ದರು.
ಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಬೇಕೆಂದು ಅದೇ ಜನತಾ ದಳ (ಯುನೈಟೆಡ್) ನಾಯಕರು ತಮ್ಮ ಬಳಿಗೆ ಬಂದಿದ್ದಾರೆ. ಕುಮಾರ್ ದಿಲ್ಲಿಗೆ ಹೋದರೆ ನೀವೇ ಬಿಹಾರ ಮುಖ್ಯಮಂತ್ರಿಯಾಗಬಹುದು ಎಂಬ ಯೋಜನೆಯೊಂದಿಗೆ ಅವರು ನನನ್ನು ಸಂಪರ್ಕಿಸಿದ್ದರು ಎಂದು ಮೋದಿ ಹೇಳಿದ್ದರು.
"ನಾವು ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇವೆ. ನಾನು ಉಪರಾಷ್ಟ್ರಪತಿಯಾಗಲು ಬಯಸುವುದು ತಮಾಷೆಯಾಗಿದೆ" ಎಂದು ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನ ಕುಮಾರ್ ಹೇಳಿದರು.