ಆನಂದ ಸುವರ್ಣ ಅಂಬಲಪಾಡಿ
Update: 2022-10-24 14:08 GMT
ಉಡುಪಿ, ಅ.24: ಉಡುಪಿಯಲ್ಲಿ ಸೀಟ್ ಕುಶನ್ ವರ್ಕ್ಸ್ ವ್ಯವಹಾರ ನಡೆಸುತ್ತಿದ್ದ ಅಂಬಲಪಾಡಿ ನಿವಾಸಿ ಆನಂದ ಸುವರ್ಣ (64) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ದೈವ ಭಕ್ತರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಇವರು, ಸುಮಾರು 45 ವರ್ಷಗಳಿಂದ ಸತತವಾಗಿ ತನ್ನ ಶಿಷ್ಯ ವರ್ಗದೊಂದಿಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರ ವರ್ಗವನ್ನು ಅಗಲಿದ್ದಾರೆ.