ರಶೀದ್ ಸಾಹೇಬ್

Update: 2022-10-25 15:46 GMT

ಉಡುಪಿ, ಅ.25: ಉಡುಪಿ ಇಂದ್ರಾಳಿಯ ಹೆಸರಾಂತ ರಾಯಲ್ ಎನ್ ಫೀಲ್ಡ್ ಆಟೋ ಕೇರ್‌ನ ಮಾಲೀಕ ರಶೀದ್ ಸಾಹೇಬ್ (68) ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಇವರು ಇಂದ್ರಾಳಿ ರೈಲ್ವೇ ಸ್ಟೇಷನ್ ರೋಡ್‌ನ ಸಮೀಪದಲ್ಲಿ ಬುಲೆಟ್ ಗ್ಯಾರೇಜ್ ಹೊಂದಿದ್ದು, ಸುಮಾರು 50 ವರ್ಷಗಳ ಅನುಭವದೊಂದಿಗೆ ಕರಾವಳಿಯಲ್ಲಿ ಚಿರಪರಿಚಿತರಾಗಿದ್ದರು. ಬುಲೆಟ್ ಪ್ರಿಯರ ಬಹುದೊಡ್ಡ ಆಪ್ತ ವಲಯವನ್ನು ಹೊಂದಿದ್ದ ಸಹೃದಯಿ ವ್ಯಕ್ತಿ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಹರಿಶ್ಚಂದ್ರ
ವಿಮಲ ಭಟ್