ಮೋಹನ್ ತೋನ್ಸೆ

Update: 2022-10-29 14:36 GMT

ಉಡುಪಿ : ಪ್ರತಿಭಾನ್ವಿತ ಹವ್ಯಾಸಿ ಯಕ್ಷಗಾನ ವೇಷಧಾರಿಯೂ, ಚಂಡೆವಾದಕರೂ ಆಗಿದ್ದ ಮೋಹನ್ ತೋನ್ಸೆ (62) ಇವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿ ಸಂತೆಕಟ್ಟೆಯಲ್ಲಿರುವ ಭಾರತ ಗ್ಯಾಸ್ ಏಜೆನ್ಸಿಯ ಮಾಲಕರಾಗಿದ್ದ ಇವರು ಕೊಡುಗೈ ದಾನಿ ಹಾಗೂ ಧಾರ್ಮಿಕ ಮನೋಭಾವದವರಾಗಿದ್ದರು.  ಯಕ್ಷಗಾನ ಕಲಾರಂಗದ ಆಕಾಶವಾಣಿ ತಂಡದಲ್ಲಿ ಚಂಡೆವಾದಕರಾಗಿ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದರು. ಯಕ್ಷಗುರು ತೋನ್ಸೆ ಜಯಂತಕುಮಾರ್ ಅವರ ಶಿಷ್ಯರಾಗಿದ್ದ ಮೋಹನ ತೋನ್ಸೆ, ಪತ್ನಿ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೋಹನ್ ತೋನ್ಸೆಯವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು  ಕಾರ್ಯದರ್ಶಿ ಮುರಲಿ ಕಡೆಕಾರ್‌ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್