ಹಸನಬ್ಬ

Update: 2022-11-01 02:31 GMT

ಮಂಗಳೂರು, ನ.1: ಪಾವೂರು ಗ್ರಾಮದ ಮಲಾರ್ ಅರಸ್ತಾನ ಕೆಳಗಿನ ಮಾರ್ಗ ನಿವಾಸಿ ಹಸನಬ್ಬ ಯಾನೆ ರಿಕ್ಷಾ ಹಸನಾಕ‌ (74) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ತಡರಾತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪತ್ನಿ, ಏಳು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅವರು  ಅಗಲಿದ್ದಾರೆ.

ಮೂಲತಃ‌ ಸಜಿಪ‌ ಮುನ್ನೂರು ಗ್ರಾಮದವರಾದ ಹಸನಬ್ಬ ಸುಮಾರು ‌50 ವರ್ಷದಿಂದ ಮಲಾರ್‌ನಲ್ಲಿ ನೆಲೆಸಿದ್ದರು. ಸಾಮಾಜಿಕವಾಗಿಯೂ ಸಕ್ರಿಯರಾಗಿದ್ದ ಹಸನಬ್ಬ ಅವರು ಸ್ಥಳೀಯವಾಗಿ ರಿಕ್ಷಾ ಹಸನಾಕ ಎಂದು ಗುರುತಿಸಲ್ಪಟ್ಟಿದ್ದರು.

Similar News

ಹರಿಶ್ಚಂದ್ರ
ವಿಮಲ ಭಟ್