ಗೌರಿ ಶಂಕರ
Update: 2022-11-01 14:35 GMT
ಕುಂದಾಪುರ, ನ.1: ಅವಿಭಜಿತ ದ.ಕ. ಜಿಲ್ಲೆಯ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿ ಆಗಿದ್ದ ಕುಂದಾಪುರ ಎ.ಕೆ.ಜಿ.ರಸ್ತೆಯ ನಿವಾಸಿ ವಿ.ಶಂಕರ್ ಯಾನೆ ಗೌರಿ ಶಂಕರ (93) ವಯೋ ಸಹಜತೆಯಿಂದ ಅ.31ರಂದು ರಾತ್ರಿ ಸ್ವಗೃಹಗದಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಪಿಎಂ ಹಿರಿಯ ಮುಖಂಡ ರಾದ ವಿ.ನರಸಿಂಹ, ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಪಿಎಂ ಸ್ಥಳೀಯ ಮುಖಂಡರಾದ ಚಂದ್ರಶೇಖರ ವಿ. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.