ಸಿ.ಎ. ಮೊಹಿದ್ದೀನಬ್ಬ
Update: 2022-11-12 02:54 GMT
ಸಾಗರ : ಮಂಗಳೂರಿನ ಬಂದರು ನಿವಾಸಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಮೊಹಿದ್ದೀನಬ್ಬ (85), ಶನಿವಾರ ಮುಂಜಾನೆ ನಿಧನರಾದರು.
ಕಳೆದೊಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಇವರು ಮೂಲತಃ ಮಂಗಳೂರಿನವರಾದರು ಶಿವಮೊಗ್ಗ, ಸಾಗರದಲ್ಲಿ ಉದ್ದಿಮೆ ಆರಂಭಿಸಿದ್ದರು. ಸಾಗರದ ಭಾರತ್ ಪೆಟ್ರೋಲ್ ಬಂಕ್ ಅನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು.
ಮೃತರು ಪತ್ನಿ ಹಾಗೂ ನಾಲ್ವರು ಪುತ್ರರು, ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಪುರಸಭೆ ಮಾಜಿ ಉಪಾಧ್ಯಕ್ಷ ಮಹಮ್ಮದ್ ಖಾಸಿಂ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಜಾ (ಪೆಟ್ರೋಲ್ ಬಂಕ್) ಸಂತಾಪ ಸೂಚಿಸಿದ್ದಾರೆ.