ಚಂದ್ರ ನಾಯ್ಕ ನಂಚಾರು
Update: 2022-11-25 14:10 GMT
ಉಡುಪಿ: ಮಂದಾರ್ತಿ ಮೇಳದ ಕಲಾದರಾಗಿದ್ದ ಚಂದ್ರ ನಾಯ್ಕ ನಂಚಾರು (29) ಗುರುವಾರ ಅಕಾಲಿಕವಾಗಿ ನಿಧನರಾದರು. ಅವರು ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ಚಂದ್ರ ನಾಯ್ಕ ಐದಾರು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಕಲಾವಿದರಾಗಿ ದುಡಿಯುತಿದ್ದು, ಕೋವಿಡ್ ನಂತರ ಕಳೆದ ಎರಡು ವರ್ಷದಿಂದ ಮೇಳಕ್ಕೆ ಹೋಗುತ್ತಿರಲಿಲ್ಲ. ಮೇಳದಲ್ಲಿ ಅವರು ಸ್ತ್ರೀವೇಷ ಮಾಡುತ್ತಿದ್ದರು. ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.