ಮನೋವೈದ್ಯ ಡಾ.ಪಿ.ವಿ.ಭಂಡಾರಿಗೆ ಮಾತೃವಿಯೋಗ
Update: 2022-12-17 10:25 GMT
ಉಡುಪಿ, ಡಿ.17: ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರ ತಾಯಿ ಮೀನಾಕ್ಷಿ ವಿ.ಭಂಡಾರಿ(74) ಇಂದು ಮಧ್ಯಾಹ್ನ 3:30ಕ್ಕೆ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಮಾಹೆಯ ನಿವೃತ್ತ ಪ್ರೊವೈಸ್ ಚಾನ್ಸಲರ್ ದಿವಂಗತ ಪ್ರೊ.ವರದರಾಜ ಭಂಡಾರಿಯವರ ಪತ್ನಿಯಾಗಿದ್ದ ಮೀನಾಕ್ಷಿ ಭಂಡಾರಿ, ಕೆನರಾ ಬ್ಯಾಂಕಿನ ಎಜಿಎಂ ಆಗಿ ನಿವೃತ್ತರಾಗಿದ್ದರು. ಇವರು ಪುತ್ರ ಡಾ.ಪಿ.ವಿ.ಭಂಡಾರಿ, ಪುತ್ರಿ ವಿಶಾಲಾಕ್ಷಿ, ಸೊಸೆ ನೇತ್ರತಜ್ಞೆ ಡಾ.ಸುಲತಾ ಭಂಡಾರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.