ಮುಹಮ್ಮದ್ ಮೇಗಿನಮನೆ
Update: 2022-12-25 18:19 GMT
ಬಂಟ್ವಾಳ, ಡಿ.25: ಅಮ್ಮುಂಜೆ ಗ್ರಾಮದ ಕಣಿಯೂರು ಮೇಗಿನಮನೆ ನಿವಾಸಿ, ಉದ್ಯಮಿ ಕೆ.ಮುಹಮ್ಮದ್ ಮೇಗಿನಮನೆ(62) ಶುಕ್ರವಾರ ನಿಧನರಾಗಿದ್ದಾರೆ.
ಅಮ್ಮುಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದ ಇವರು, ಎಸ್ಕೆಎಸ್ಸೆಸ್ಸೆಫ್ ಅಮ್ಮುಂಜೆ ಘಟಕದ ಗೌರವಾಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಆರು ಮಂದಿ ಪುತ್ರಿಯರು, ನಾಲ್ವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.