ವಾರಿಜಾ ಡಿ. ಸುವರ್ಣ

Update: 2023-01-06 16:06 GMT

ಮಂಗಳೂರು: ಬಿಲ್ಲವ ಸಮಾಜದ ಮುಖಂಡರಾಗಿದ್ದ ದಿ. ದಾಮೋದರ ಡಿ. ಸುವರ್ಣ ಅವರ ಪತ್ನಿ ವಾರಿಜಾ ಡಿ. ಸುವರ್ಣ (96) ಶುಕ್ರವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾರ್ಥ ಕ್ಷೇತ್ರ ಮತ್ತು ಕಂಕನಾಡಿ ಗರೋಡಿ ಕ್ಷೇತ್ರದ ಟ್ರಸ್ಟಿ ಜಗದೀಪ್ ಡಿ. ಸುವರ್ಣ, ಉದ್ಯಮಿಗಳಾದ ಉದಯಚಂದ್ರ ಡಿ. ಸುವರ್ಣ, ವಿನಯಚಂದ್ರ ಡಿ. ಸುವರ್ಣ ಹಾಗೂ 4 ಮಂದಿ ಪುತ್ರಿಯರನ್ನು ಮೃತರು ಅಗಲಿದ್ದಾರೆ.

ಪತಿ ದಾಮೋದರ ಸುವರ್ಣರ ಕಾರ್ಯದಲ್ಲಿ  ಸ್ಫೂರ್ತಿ ತುಂಬಿದ್ದ ಇವರು ತಮ್ಮ ಮಕ್ಕಳಿಗೂ ಅದೇ ಸಂಸ್ಕಾರವನ್ನು ಬೆಳೆಸಿದ್ದರು. ಸಂಜೆ ಗೋರಿಗುಡ್ಡದಲ್ಲಿರುವ ಸ್ವಗೃಹದಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಹೊರಟು ನಂದಿಗುಡ್ಡದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಸಂತಾಪ: ವಾರಿಜಾ ಅವರ ನಿಧನಕ್ಕೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ,ಉಮಾನಾಥ ಕೋಟ್ಯಾನ್, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೇಯರ್ ಜಯಾನಂದ ಅಂಚನ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

Similar News

ಹರಿಶ್ಚಂದ್ರ
ವಿಮಲ ಭಟ್